ಮಂಗಳೂರು: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ. ವಾಮಂಜೂರು ನಿವಾಸಿ ಸಲ್ಮಾನ್ (50) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.

ಮದುವೆ ವಿಚಾರವಾಗಿ ನಡೆದ ಕಲಹ‌ ಕೊಲೆಯಲ್ಲಿ ಅಂತ್ಯವಾಗಿದೆ. ಸಂಬಂಧಿ ಮುಸ್ತಫ್ತಾ ಎಂಬವರ ಮದುವೆಯನ್ನು ಸಲ್ಮಾನ್ ನೆರವೇರಿಸಿದ್ದನು. ಮದುವೆ ಸಂದರ್ಭ‌ ನಡೆದಿದ್ದ ಮುಸ್ತಫಾ ಮತ್ತು ಸಲ್ಮಾನ್ ನಡುವೆ ಗಲಾಟೆ ವಿಚಾರವಾಗಿ ಮುಸ್ತಫಾ ಜೊತೆ ಮಾತುಕತೆಗೆ ಸಲ್ಮಾನ್ ಬಂದಿದ್ದನು.

ತನ್ನ ಇಬ್ಬರು ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರೊಂದಿಗೆ ಸಲ್ಮಾನ್ ಮಾತುಕತೆಗೆ ಬಂದಿದ್ದನು. ಮಾತಿಗೆ ಮಾತು ಬೆಳೆದು ಸಲ್ಮಾನ್ ಅವರಿಗೆ ಮುಸ್ತಫಾ (30) ಚೂರಿಯಿಂದ ಇರಿದರು. ಸಲ್ಮಾನ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರ ಮೇಲು ಮುಸ್ತಫಾ ದಾಳಿ ನಡೆಸಿದ್ದರು.

ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾರಿ ಮಧ್ಯೆ ಸಲ್ಮಾನ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಸಲ್ಮಾನ್‌ ಮುತ್ರರಾದ ರಿತಾಬ್ ಮತ್ತು ಶಿಯಾಬ್ ಅವರಿಗೂ ಗಾಯ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ಬಳಿಕ ಮುಸ್ತಫಾ ಪರಾರಿಯಾಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಾರಿಯಾದ ಮುಸ್ತಫಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದರು.