ಉತ್ತರ ಪ್ರದೇಶ: ದುಷ್ಕರ್ಮಿಗಳು ಯುವಕನೊಬ್ಬನನ್ನು ಜೀವಂತ ಸಮಾಧಿ ಮಾಡಿದ್ದು, ಆ ಸ್ಥಳಕ್ಕೆ ಬಂದ ಬೀದಿ ನಾಯಿಗಳು ಯುವಕನ ಪ್ರಾಣ ರಕ್ಷಣೆಗೆ ಪರೋಕ್ಷವಾಗಿ ಸಹಾಯ ಮಾಡಿದೆ.
ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು 24 ವರ್ಷದ ರೂಪ್ ಕಿಶೋರ್ ಎಂಬ ಯುವಕನಿಗೆ ಮನಬಂದಂತೆ ಥಳಿಸಿ ಆತನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ನಡೆಸಲು ಯತ್ನಿಸಿದ್ದಾರೆ. ಪಾಪಿಗಳು ಕೊಟ್ಟ ಏಟಿಗೆ ಆ ಯುವಕ ಪ್ರಜ್ಞೆ ತಪ್ಪಿದ್ದಾನೆ. ಈತ ಸತ್ತು ಹೋಗಿದ್ದಾನೆ ಎಂದು ಭಾವಿಸಿದ ಆ ದುಷ್ಕರ್ಮಿಗಳು ಯುವಕನ್ನು ಜೀವಂತ ಸಮಾಧಿ ಮಾಡಿದ್ದಾರೆ.Assuming
ಸುಮಾರು ಮಧ್ಯರಾತ್ರಿ ಹೊತ್ತಿಗೆ ರಕ್ತದ ವಾಸೆಯನ್ನು ಹಿಡಿದು ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆದು, ಮಣ್ಣಿನಡಿಯಲ್ಲಿದ್ದ ಯುವಕನ ದೇಹವನ್ನು ಎಳೆದಾಡಿ ತಿನ್ನಲು ಯತ್ನಿಸಿದೆ. ಈ ಸಂದರ್ಭದಲ್ಲಿ ಯುವಕನಿಗೆ ಪ್ರಜ್ಞೆ ಬಂದಿದ್ದು, ತಕ್ಷಣ ಅಲ್ಲಿಂದ ಎದ್ದು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾನೆ. ನಂತರ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಮನೆಯವರನ್ನು ಸಂಪರ್ಕಿಸಿದ್ದಾನೆ. ಬಳಿಕ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ರೂಪ್ ಕಿಶೋರ್ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು, ದೂರಿನ ಆಧಾರರ ಮೇರೆಗೆ ಸೆಕ್ಷನ್ 109, ಸೆಕ್ಷನ್ 115. ಸೆಕ್ಷನ್ 351 ರ ಅಡಿಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ.

