ಮೈಸೂರು : ತಡರಾತ್ರಿ ಬರ್ಬರ ಹತ್ಯೆ ನಡೆದಿರುವ ಘಟನೆ ಮೈಸೂರು ತಾಲೂಕಿನ ಅನುಗನಹಳ್ಳಿಯಲ್ಲಿ ನಡೆದಿದೆ. ಸೂರ್ಯ ಕೊಲೆಯಾದ ವ್ಯಕ್ತಿ ಎಂಬ ಮಾಹಿತಿ ತಿಳಿದು ಬಂದಿದೆ. ಮದುವೆಯಾಗಿದ್ದರು ಮತ್ತೊಬ್ಬಳ ಜೊತೆ ಸೂರ್ಯ ಸಂಬಂಧ ಹೊಂದಿದ್ದನು. ಇದರಿಂದ ಬೇಸತ್ತು ಹೆಂಡತಿ ಹಾಗೂ ತಾಯಿ ಮನೆ ಬಿಟ್ಟು ಹೋಗಿದ್ದರು.

ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಅನ್ನುವವಳ ಜೊತೆ ಪರಿಚಯ ಹೊಂದಿದ್ದನು. ಬಳಿಕ ಅವಳ ಜೊತೆ ಸೂರ್ಯ ಸಂಬಂಧದಲ್ಲಿದ್ದನು. ಇಬ್ಬರು ಜೊತೆ ಇರುವ ಖಾಸಗಿ ಪೋಟೋಗಳ ಸ್ಟೇಟಸನ್ನು ಸೂರ್ಯ ಹಾಕಿದ್ದನು.

ಕೆಲ ದಿನಗಳಿಂದ ಹಣ ಆಸ್ತಿಗಾಗಿ ಶ್ವೇತಾ ಪೀಡಿಸುತ್ತಿದ್ದಳು. ಹಣಕ್ಕೆ ಪೀಡಿಸುತ್ತಿರುವ ವಿಚಾರವನ್ನ ಸೂರ್ಯ ಕುಟುಂಬಸ್ಥರಿಗು ತಿಳಿಸಿದ್ದನು. ನಿನ್ನೆ ರಾತ್ರಿ ಕೂಡ ತೋಟದಲ್ಲಿ ಶ್ವೇತಾ ಹಾಗೂ ಸೂರ್ಯ ಜೊತೆಯಲ್ಲಿ ಇದ್ದರು.

ಬೆಳಗಾಗುವಷ್ಟರಲ್ಲಿ ಕೊಲೆಯಾಗಿರುವ ವಿಚಾರ ಗೊತ್ತಾಗಿದ್ದು, ರಾತ್ರಿ ಅವಳ ಜೊತೆಯಲ್ಲೆ ಇದ್ದು, ಬೆಳಿಗ್ಗೆ ವಾಪಸ್ಸು ಹೋಗಿರುವುದನ್ನು ಕೆಲವರು ನೋಡಿದ್ದಾರೆ. ಕೊಲೆಯನ್ನ ಶ್ವೇತಾಳೆ ಮಾಡಿರಬಹುದು ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಪ್ರಕರಣ ಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.