ಮಣಿಪುರ: ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಶಿರಚ್ಛೇದ ಮಾಡಿರುವ ಘಟನೆ ಮಣಿಪುರದ  ಲೀಶಾಬಿಥೋಲ್‌ನಲ್ಲಿ ನಡೆದಿದೆ.

ಬಲಿಯಾದವರನ್ನು ಸೋಬಾಮ್ ಶರತ್‌ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.

ಶರತ್‌ಕುಮಾರ್ ಅವರು ಲೀಶಾಬಿಥೋಲ್‌ನಲ್ಲಿರುವ ತಮ್ಮ ಮಗನ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಸಂಜೆ 5 ಗಂಟೆ ಸುಮಾರಿಗೆ  ಖಾಸಿಯಾ ಪುಂಜಿ ಬಳಿ ಅಪರಿಚಿತ ದುಷ್ಕರ್ಮಿಗಳು ಅವರನ್ನು ಕಟ್ಟಿಹಾಕಿ ಹತ್ಯೆ ಗೈದಿದ್ದಾರೆ.

ಜಿರಿಬಾಮ್ ಪೊಲೀಸ್ ಠಾಣೆಯಿಂದ ಉತ್ತರಕ್ಕೆ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಮುಲರ್ಗೋನ್ ಬಳಿ ಶರತ್​ಕುಮಾರ್ ದೇಹವು ಪತ್ತೆಯಾಗಿತ್ತು.

ಸದಸ್ಯರು ಜಿರಿಬಾಮ್ ಜಿಲ್ಲಾ ಪೊಲೀಸರಿಗೆ ತಕ್ಷಣ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ಮತ್ತು ದಾಳಿಕೋರರ ಗುರುತು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೃತರ ಪತ್ನಿ ಸೋಬಾಮ್ ರೊಮೊಲಾ ಅವರು, ತಾನು ಮತ್ತು ತನ್ನ ಮಗ ತನ್ನ ಪತಿಗಿಂತ ಮುಂಚಿತವಾಗಿ ಜಮೀನಿನಿಂದ ಹಿಂತಿರುಗುತ್ತಿದ್ದಾಗ ಕುಕಿ ಸಮುದಾಯದ ಕೆಲವರು ಬಂದಿದ್ದರು ಎಂದು ಹೇಳಿದ್ದಾರೆ.

ಇದರಿಂದ  ಕೋಪಗೊಂಡ ಗುಂಪೊಂದು ಸಮೀಪದ ಪ್ರದೇಶದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಮನೆಗಳಿಗೆ ಬೆಂಕಿ ಹಚ್ಚಿದೆ.