ಮಧ್ಯಪ್ರದೇಶ:   ಮದುವೇ ದಿನವೇ ಯುವತಿ ಸಾವನಪ್ಪಿರುವ ದಾರುಣ ಘಟನೆ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಮದುವೆ ದಿನ ಸಿಂಗರಿಸಿಕೊಳ್ಳಲೆಂದು ಬ್ಯೂಟಿ ಪಾರ್ಲರ್​ಗೆ ಬಂದಿದ್ದ ಯುವತಿಯನ್ನು ಮಾಜಿ ಪ್ರಿಯಕರ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಯುವಕ ಬೆನ್ನಿಗೊಂದು ಬ್ಯಾಗ್ ಹಾಗೂ ಕೈಯಲ್ಲಿ ಪಿಸ್ತೂಲ್ ಹಿಡಿದು ಬ್ಯೂಟಿ ಪಾರ್ಲರ್​ ಒಳಗೆ ಬಂದಿದ್ದಾನೆ.ಕಾಜಲ್ (20) ಮೃತ ಯುವತಿ.

ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಬಂದ ಆತ 32 ಸೆಕೆಂಡ್‌ಗಳು ಯುವತಿಯ ಎದೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಕ್ಕದ ಮನೆಯ ಯುವಕ ದೀಪಕ್ ಎಂಬಾತ ಆಕೆಯನ್ನು ಇಷ್ಟಪಟ್ಟಿದ್ದ, ಇಬ್ಬರೂ ಮದುವೆಯಾಗಲು ಬಯಸಿದ್ದರು. ಮದುವೆಗೆ ಸ್ವಲ್ಪ ಸಮಯದ ಮೊದಲು ಕಾಜಲ್ ಕೂಡ ದೀಪಕ್ ಜೊತೆ ಓಡಿ ಹೋಗಿದ್ದಳು. ಆದರೆ ನಂತರ ಅವಳು ತನ್ನ ಕುಟುಂಬ ಆಯ್ಕೆ ಮಾಡಿದ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದಳು.