Bengaluru 24°C
Ad

ಮಗಳ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಪ್ಪನಿಗೆ 101 ವರ್ಷ ಜೈಲು

Kerala

ಕೊಚ್ಚಿ: ಕೇರಳದ ಹೆಚ್​. ಮುಹಮ್ಮದ್ ಎಂಬ ವ್ಯಕ್ತಿಗೆ ಕೇರಳದ ನ್ಯಾಯಾಲಯವು ತನ್ನ ಅಪ್ರಾಪ್ತ ಮಗಳ ಮೇಲೆ 6 ವರ್ಷಗಳಿಂದ ಅತ್ಯಾಚಾರ ನಡೆಸಿದ್ದಕ್ಕಾಗಿ 101 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

Ad
300x250 2

ಹಾಗೇ, ಜೀವಾವಧಿ ಶಿಕ್ಷೆ ಘೋಷಿಸಿದೆ. ಆ ಬಾಲಕಿಯ ಮೇಲೆ 6 ವರ್ಷಗಳ ಕಾಲ ಮುಹಮ್ಮದ್ ಅತ್ಯಾಚಾರ ಮಾಡಿದ್ದ. ಇದರಿಂದಾಗಿ 16ನೇ ವಯಸ್ಸಿನಲ್ಲಿ ಆಕೆ ಗರ್ಭಿಣಿಯಾಗಿದ್ದಳು. ಇದರಿಂದಾಗಿ ಆತನ ಕೃತ್ಯ ಬೆಳಕಿಗೆ ಬಂದಿತ್ತು.

ಅಪರಾಧಿ ಮುಹಮ್ಮದ್ ತನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಮರ್ಥನೆ ಮಾಡಿಕೊಂಡು, ಎಲ್ಲಾ ತಂದೆಯರೂ ತಮ್ಮ ಹೆಣ್ಣುಮಕ್ಕಳಿಗೆ ಹೀಗೆಯೇ ಮಾಡುತ್ತಾರೆ ಎಂದು ಹೇಳಿದ್ದ. ಇಂತಹ ಅಪರಾಧಗಳು ಮಕ್ಕಳ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಗಣನೀಯ ಪರಿಣಾಮ ಬೀರುವುದರಿಂದ ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿದೆ ಎಂದು ನ್ಯಾಯಾಲಯವು ಹೇಳಿದೆ.

Ad
Ad
Nk Channel Final 21 09 2023
Ad