ಕಾಸರಗೋಡು: ಸೌದಿ ಅರೇಬಿಯಾದಲ್ಲಿ ಕಾಸರಗೋಡು ನಿವಾಸಿಯೋರ್ವರನ್ನು ಗುಂಡಿಕ್ಕಿ ಕೊಲೆಗೈದ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.
ಕುತ್ತಿಕೋಲ್ ಏಣಿಯಾಡಿ ಯ ಬಷೀರ್ (42) ಕೊಲೆಗೀಡಾದವರು. ಕಳೆದ 15 ವರ್ಷಗಳಿಂದ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು. ಸೌದಿ ಅರೇಬಿಯಾದ ಬಿಶ್ ನಕಿಯಾದ 35 ಕಿ.ಮೀ ದೂರದ ರಾನಿಯಾ – ಕುರುಮಾ ರಸ್ತೆಯಲ್ಲಿ ಮನೆ ಬಳಿ ಕಾರು ಕ್ಲೀನ್ ಮಾಡುತ್ತಿದ್ದಾಗ ದುಷ್ಕರ್ಮಿ ಗಳು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

