ಸಿಂಗಾಪುರ: ಮೂವರು ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಭಾರತೀಯ ಮೂಲದ ಯೋಗ ಗುರುಗೆ ಸಿಂಗಾಪುರ ಕೋರ್ಟ್​​ ಜೈಲು ಶಿಕ್ಷೆ ವಿಧಿಸಿದೆ.

ರಾಜ್​ಪಾಲ್ ಸಿಂಗ್ (35) ಶಿಕ್ಷೆಗೆ ಗುರಿಯಾದ ಯೋಗ ಗುರು. ರಾಜ್​ಪಾಲ್ ಸಿಂಗ್​​ನನ್ನು 23 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಿದೆ. ಇವರು ಸಿಂಗಾಪುರದ ತೆಲೋಕ್ ಅಯೇರ್​​ ಸ್ಟ್ರೀಟ್​ನಲ್ಲಿರುವ Trust Yogaದಲ್ಲಿ ಯೋಗ ಗುರುವಾಗಿ ಸೇರಿಕೊಂಡಿದ್ದರು.

ಯೋಗ ಕ್ಲಾಸ್ ಮಾಡುವ ವೇಳೆ ಮಹಿಳೆಯರಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಆರೋಪ ಕೇಳಿಬಂದ ಬೆನ್ನಲ್ಲೇ ಅಲ್ಲಿಂದ ಅವರನ್ನು ಕಿಕ್​​ಔಟ್ ಮಾಡಲಾಗಿತ್ತು. ಅವರ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರು ಕಿರುಕುಳ ನೀಡಿದ ಆರೋಪ ಮಾಡಿದ್ದರು. ವಿಚಾರಣೆ ವೇಳೆ ಯೋಗ ಹೆಸರಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರೋದನ್ನು ಕೋರ್ಟ್​ ಗಮನಿಸಿ, 23 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.