ಭಾರತ: ವಿದ್ಯುತ್ ಅಘಾತದಿಂದ ಭಾರತೀಯ ಮೂಲದ ವ್ಯಕ್ಕಿ ಸೌದಿ ಅರೇಬಿಯಾದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಮೊಹಮ್ಮದ್ ಅಲಿ (36) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಕರ್ತವ್ಯದಲ್ಲಿದ್ದಾಗ ಮೊಹಮ್ಮದ್ ಅಲಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶ ಉಂಟಾಗಿ ಸಾವನ್ನಪ್ಪಿದ್ದಾರೆ.  ಐಸಿಎಫ್ ಕಾರ್ಯಕರ್ತ ಮೊಹಮ್ಮದ್ ಅಲಿ ಮೂಲತಃ ಕೇರಳದ ಕೋಝಿಕ್ಕೋಡ್ ನ ಮುಕ್ಕಂ ತಾಲೂಕಿನ ವಲಿಯಪರಂಬ ನಿವಾಸಿಯಾಗಿದ್ದಾರೆ. ಮೃತರು ತಂದೆ ಅಬ್ದುರಹ್ಮಾನ್, ತಾಯಿ ಆಯೇಷಾ, ಪತ್ನಿ ಫಾತಿಮಾ ಜುಮಾನಾ ಮತ್ತು ಪುತ್ರಿ ಫಾತಿಮಾ ಹಬೀಬಾ ಅವರನ್ನು ಅಗಲಿದ್ದಾರೆ.

ಖಮೀಜ್ ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಸಾಮಾಜಿಕ ಪರಿಹಾರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಮೊಹಮ್ಮದ್ ಅಲಿ, ಐಸಿಎಫ್ ಸಾರ್ವಜನಿಕ ಸಂಪರ್ಕ ಮತ್ತು ಖಾಮಿಸ್ ಮುಶೈತ್ ಪ್ರದೇಶದ ಮಾಧ್ಯಮ ಕಾರ್ಯದರ್ಶಿಯಾಗಿದ್ದರು. ಆಟಿಸಂ ಹೊಂದಿರುವ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ರಿಫೈ ಕೇರ್ ಫಂಡ್ ರಚನೆ ಮತ್ತು ಸಮನ್ವಯದಲ್ಲಿ ತೊಡಗಿಸಿಕೊಂಡಿದ್ದರು.

ಸೌದಿ ಅರೇಬಿಯಾದ ಖಾಮಿಸ್ ಮುಸೈತ್ ಬಿನ್ ಹಸನ್ ಅಲ್ ಮನಿಯಿ ಮಸೀದಿಯಲ್ಲಿ ಅಸ್ರ್ ಪ್ರಾರ್ಥನೆಯ ನಂತರ, ಅಂತ್ಯಕ್ರಿಯೆ  ನಡೆಯಿತು. ಮೃತದೇಹವನ್ನು ಮಹಾಲಾ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಸಮೀಪದ ಕರಮಾ ಸ್ಮಶಾನದಲ್ಲಿ ದಫನ ಮಾಡಲಾಯಿತು.

ಐಸಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಕುಟ್ಟಿಯಾಡಿ, ಕಾರ್ಯದರ್ಶಿಗಳಾದ ಮಹಮೂದ್ ಸಕಾಫಿ ಮತ್ತು ಅಬ್ದುಸ್ ಸಲಾಂ ಕುಟ್ಟಿಯಾಡಿ, ಪಶ್ಚಿಮ ಚಾಪ್ಟರ್ ಮಾಧ್ಯಮ ಕಾರ್ಯದರ್ಶಿ ಅಬ್ದುಸ್ ಸತ್ತಾರ್ ಪತಿಮಂಗಲಂ, ಐಸಿಎಫ್ ಸೌದಿ ರಾಷ್ಟ್ರೀಯ ಅಧ್ಯಕ್ಷ ಅಬ್ದುರ್ ರಶೀದ್ ಸಕಾಫಿ ಮುಕ್ಕಂ ,  ಐಸಿಎಫ್ ಮುಖಂಡರು ಮತ್ತು ಕಾರ್ಯಕರ್ತರು, ಖಮೀಜ್ ಮತ್ತು ಮಲಯಾಳಿ ಸ್ನೇಹಿತರ ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರದ ಜನರು ಅಂತ್ಯಕ್ರಿಯೆಯಲ್ಲಿ  ಭಾಗವಹಿಸಿದ್ದರು.