ಬೆಂಗಳೂರು: ಶೀಲ ಶಂಕಿಸಿ ಪತಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್​ನ ಮನೆಯಲ್ಲಿ ದುಷ್ಕೃತ್ಯ ನಡೆದಿದೆ. ಪತ್ನಿ ನವ್ಯಾ(24)ರನ್ನು ಚೇರ್​ಗೆ ಕಟ್ಟಿಹಾಕಿ ಕತ್ತು ಕೊಯ್ದು ಪತಿ ಕಿರಣ್ ಕೊಲೆ ಮಾಡಿದ್ದಾರೆ. ಕಳೆದ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಕಿರಣ್​​ ಕ್ಯಾಬ್​ ಚಾಲಕನಾಗಿದ್ದ. ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ  ಹೇಳಿಕೊಡುತ್ತಿದ್ದ ಮೃತ ನವ್ಯಾ ಕೊರಿಯೊಗ್ರಾಫರ್ ಆಗಿದ್ದರು. ಆರೋಪಿ ವಶಕ್ಕೆ ಪಡೆದು ಕೆಂಗೇರಿ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.