ಮೈಸೂರು: ನಿನ್ನೆ ದಸರಾ ವಸ್ತು ಪ್ರದರ್ಶನದ ಬಳಿ ನಡೆದ ಕೊಲೆ ಸ್ಥಳದಲ್ಲೇ ಬಾಲಕಿಯೊಬ್ಬಳ ಶವ ಪತ್ತೆಯಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಆವರಣ ಸಮೀಪ ಮೊನ್ನೆ ನಡೆದಿದ್ದ ಕ್ಯಾತಮಾರನಹಳ್ಳಿ ವೆಂಕಟೇಶ್ ಮರ್ಡರ್ ಆದ ಸ್ಥಳದಲ್ಲೇ 13 ರಿಂದ 14 ವರ್ಷದ ಬಾಲಕಿ ಶವ ಪತ್ತೆಯಾಗಿದೆ.
ಅಪರಿಚಿತ ಬಾಲಕಿ ಶವ ಪತ್ತೆಯಿಂದ ಸ್ಥಳೀಯರು ಬೆಚ್ಚಿಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಸರಾ ಮಹೋತ್ಸವದಲ್ಲಿ ಬೆಲೂನ್ ಮಾರಾಟ ಮಾಡಲು ಕಲಬುರಗಿಯಿಂದ ಬಂದಿರುವ ಕುಟುಂಬದ ಜೊತೆ ಬಾಲಕಿ ಬಂದಿದ್ದಾಳೆ. ಬಾಲಕಿಯ ಸಾವಿನ ಬಗ್ಗೆ ಹಲವಾರು ಅನುಮಾನಗಳು ಉದ್ಭವವಾಗಿದೆ.
ಮೇಲ್ನೋಟಕ್ಕೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾತಮಾರನಹಳ್ಳಿ ಕಾರ್ತಿಕ್ ನ ಗುರು ವೆಂಕಟೇಶ್ ಎಂಬಾತನ ಮರ್ಡರ್ ಇದೇ ಸ್ಥಳದಲ್ಲಿ ನಡೆದಿತ್ತು.ಇದೀಗ ಇದೇ ಸ್ಥಳದಲ್ಲೇ ಬಾಲಕಿ ಶವ ದೊರೆತು ಆತಂಕ ಸೃಷ್ಠಿಯಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್,ಡಿಸಿಪ ಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ನಜರಬಾದ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ತಂದೆ ತಾಯಿ ಜೊತೆ ರಾತ್ರಿ ಮಲಗಿದೆ.ಬೆಳಿಗ್ಗೆ 5 ಗಂಟೆಗೆ ಎಚ್ಚರವಾದಾಗ ಪಕ್ಕದಲ್ಲಿ ಮಗು ಇರಲಿಲ್ಲ. ಶೌಚಕ್ಕೆ ಇದ್ದ ಜಾಗದಲ್ಲಿ ಮಗು ಸತ್ತು ಬಿದ್ದಿದೆ.ಮಗು ಧರಿಸಿದ್ದ ಬಟ್ಟೆ ಅಸ್ತವ್ಯಸ್ತವಾಗಿತ್ತು. ಮಗು ಸಾವಿಗೆ ಕಾರಣ ಗೊತ್ತಿಲ್ಲ. ನಮಗೆ ನ್ಯಾಯ ಬೇಕು ಎಂದು ಮಗುವಿನ ಚಿಕ್ಕಪ್ಪ ಮನವಿ ಮಾಡಿದ್ದಾರೆ.

