ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಗ್ಯಾಂಗ್‌ ರೇಪ್‌ ಎಸಗಿದ್ದಾರೆ.ಜುಲೈ 20ರ ಮಧ್ಯರಾತ್ರಿ ಈ ದುರ್ಘಟನೆ ನಡೆದಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ.

https://x.com/OliLondonTV/status/1815761303383806217

25ವರ್ಷದ ಆಸ್ಟ್ರೇಲಿಯಾ ಯುವತಿ ಮೇಲೆ ಆಫ್ರಿಕಾದ ಐವರಿಂದ ಸಾಮೂಹಿಕ ಅತ್ಯಾಚಾರ ನಡೆದಿದ್ದು ಯುವತಿ ಅರೆ ಬಟ್ಟೆಯಲ್ಲೇ ಕಬಾಬ್‌ ಶಾಪ್‌ವೊಂದಕ್ಕೆ ಬಂದು ರಕ್ಷಣೆ ಪಡೆದಿದ್ದಾಳೆ. ಇದೀಗ ಈ ದೃಶ್ಯ ಸಿಸಿಟಿವಿಯಲಲಿ ಸೆರೆಯಾಗಿದೆ.

ಸಂತಸ್ತ ಮಹಿಳೆಯು ಶುಕ್ರವಾರ ಅಂದರೆ ಜುಲೈ 19ರ ರಾತ್ರಿ ಮೌಲಿನ್ ರೋಗ್ ಕ್ಯಾಬರ್ಟ್‌ನ ಬಾರ್ಸ್ & ಕ್ಲಬ್ಸ್‌ನಲ್ಲಿ ಮದ್ಯಪಾನ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ಅನಿರ್ದಿಷ್ಟ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾಗಿ 25 ವರ್ಷದ ಮಹಿಳೆ ಆರೋಪಿಸಿದ್ದಾರೆ.

ಇನ್ನು ಫ್ರೆಂಚ್ ಪೊಲೀಸರ ಬಳಿ ದೂರು ನೀಡುವ ಸಂದರ್ಭದಲ್ಲಿ ಆ ಮಹಿಳೆ, ನೋಡುವುದಕ್ಕೆ ಆಫ್ರಿಕಾ ಮೂಲದವರಂತೆ ಇದ್ದು, ಬೆಳಗಿನ ಜಾವ 5 ಗಂಟೆಯವರೆಗೂ ಗ್ಯಾಂಗ್ ರೇಪ್ ನಡೆಸಿದ್ದಾರೆ. ಇದಾದ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಕೆಬಾಬ್ ಶಾಪ್‌ನಲ್ಲಿ ಆಶ್ರಯ ಪಡೆದಿದ್ದಾಗಿ ತಿಳಿಸಿದ್ದಾರೆ ಎಂದು ಡೇಲಿ ಮೇಲ್ ವರದಿ ಮಾಡಿದೆ.

ಈಗಾಗಲೇ ಫ್ರೆಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ. ಸದ್ಯ ಆ ಸಂತ್ರಸ್ತ ಮಹಿಳೆಯು ಪ್ಯಾರಿಸ್‌ನಲ್ಲಿಯೇ ಉಳಿದುಕೊಂಡಿದ್ದು, ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.