ದೆಹಲಿ : ಅಜ್ಮೀರ್ ಲೈಂಗಿಕ ಹಗರಣದಲ್ಲಿ  100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರವೆಸಗಿ  ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ  ನ್ಯಾಯಾಲಯವು  6 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಫೋಕ್ಸೋ ನ್ಯಾಯಾಲಯವು ಆರೋಪಿಗಳಿಗೆ ತಲಾ ₹ 5 ಲಕ್ಷ ದಂಡ ವಿಧಿಸಿದೆ.

ನ್ಯಾಯಾಲಯವು ಆರೋಪಿಗಳಿಗೆ ತಲಾ ₹ 5 ಲಕ್ಷ ದಂಡ ವಿಧಿಸಿದೆ. 1992ರಲ್ಲಿ ಬೆಳಕಿಗೆ ಬಂದ ಅಜ್ಮೀರ್ ಲೈಂಗಿಕ ಹಗರಣದ ಆರೋಪಿಗಳಾದ ನಫೀಸ್ ಚಿಶ್ತಿ, ನಸೀಮ್ ಅಲಿಯಾಸ್ ಟಾರ್ಜನ್, ಸಲೀಂ ಚಿಶ್ತಿ, ಇಕ್ಬಾಲ್ ಭಾಟಿ, ಸೊಹೈಲ್ ಗನಿ ಮತ್ತು ಸೈಯದ್ ಜಮೀರ್ ಹುಸೇನ್ ಎಂಬವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ವಕೀಲ ವೀರೇಂದ್ರ ಸಿಂಗ್ ಹೇಳಿದ್ದಾರೆ.

ಏನಿದು ಪ್ರಕರಣ?
11 ರಿಂದ 20 ವರ್ಷದೊಳಗಿನ ಕಾಲೇಜು ಮತ್ತು ಶಾಲೆಗೆ ಹೋಗುವ ಹುಡುಗಿಯರಲ್ಲಿ ಗ್ಯಾಂಗ್‌ನ ಸದಸ್ಯರು ಸ್ನೇಹ ಬೆಳೆಸಿ, ದೈಹಿಕವಾಗಿ ಸಂಪರ್ಕವೇರ್ಪಟ್ಟ ಸಂದರ್ಭಗಳಲ್ಲಿ ಅವರ ಫೋಟೊ ತೆಗೆದಿದ್ದು, ನಂತರ ಅವರ ಮೇಲೆ ಅತ್ಯಾಚಾರವೆಸಗಿದ್ದರು. ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದರು. 12 ಮಂದಿ ವಿರುದ್ಧ ಪ್ರಕರಣದ ಮೊದಲ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು.

— IANS (@ians_india) August 20, 2024