ಪ್ಯಾರಿಸ್: ಮಹಿಳೆಯ ಮೇಲೆ ಐದು ಜನರು ಕಾಮಪಿಶಾಚಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಪ್ಯಾರಿಸ್ ನಲ್ಲಿ ನಡೆದಿದೆ.

ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಪ್ಯಾರಿಸ್​ಗೆ ಕಳಂಕವೊಂದು ಅಂಟಿಕೊಂಡಂತಾಗಿದೆ. ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಪಿಗಲ್ಲೆ ಜಿಲ್ಲೆ ಅಂದ್ರೆ ಫ್ರಾನ್ಸ್​ಗೆ ಅಂಟಿಕೊಂಡಿರುವ ಈ ಜಿಲ್ಲೆಯ ಒಂದು ರೆಸ್ಟೋರೆಂಟ್​ನಲ್ಲಿ 25 ವರ್ಷದ ಆಸ್ಟ್ರೇಲಿಯಾದ ಯುವತಿ ಶನಿವಾರದಂದು ಬಂದು ಉಳಿದುಕೊಂಡಿದ್ದಳು. ಇಂದು ಅವಳ ರೂಮಿಗೆ ಹೋಗಿ ನೋಡಿದಾಗ ಅವಳ ಮೈಮೇಲಿದ್ದ ಬಟ್ಟೆಯೆಲ್ಲಾ ಅಸ್ತವ್ಯಸ್ತಗೊಂಡಿದ್ದು ಕಾಣಿಸಿದೆ.

ಕೂಡಲೇ ಹೋಟೆಲ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಮೇಲ್ನೋಟಕ್ಕೆ ಇದೊಂದು ಸಾಮೂಹಿಕ ಅತ್ಯಾಚಾರದಂತೆ ಕಾಣುತ್ತಿದೆ. ಈ ಭೀಕರ ಕೃತ್ಯ ನಡೆಸಿದವರು ಯಾರು ಅನ್ನೋದು ಇನ್ನು ತಿಳಿದು ಬಂದಿಲ್ಲ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಪ್ಯಾರಿಸ್​​ನಲ್ಲಿ 2024ರ ಒಲಂಪಿಕ್ಸ್​ ಪಂದ್ಯಾವಳಿಯನ್ನು ಆಯೋಜಿಸಿರುವುದರಿಂದ ಲಕ್ಷಾಂತರ ಜನ ಸದ್ಯದಲ್ಲಿಯೇ ಇಲ್ಲಿಗೆ ನೆರೆಯಲಿದ್ದಾರೆ. ಈಗಾಗಲೇ ಫ್ರಾನ್ಸ್​ಗೆ ಹಲವು ರೀತಿಯ ಬೆದರಿಕೆಗಳು ಬಂದಿವೆ. ಭಯೋತ್ಪಾನೆ, ಸೈಬರ್ ದಾಳಿ ಸೇರಿದಂತೆ ಅನೇಕ ಬೆದರಿಕೆಗಳು ಈಗಾಗಲೇ ಫ್ರಾನ್ಸ್ ಭದ್ರತಾ ಪಡೆಗೆ ಸವಾಲಾಗಿದೆ.