ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮೇಲೆಯೇ ಮಚ್ಚಿನಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಭರತ್, ರವಿ ಎಂಬ ಇಬ್ಬರು ಯುವಕರರನ್ನು ಅರೆಸ್ಟ್‌ ಮಾಡಿದ್ದು ವಿಚಾರಣೆ ನಡೆಯುತ್ತಿದೆ. 3 ದಿನದ ಹಿಂದೆ ಮಂಜುನಾಥ ನಗರದಲ್ಲಿ ಕುಡಿತ ಮತ್ತಿನಲ್ಲಿದ್ದ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು.

ಈ ವೇಳೆ ವಿಕ್ಕಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ವಿಕ್ಕಿ ನೆಲಕ್ಕುರುಳಿದ್ದು, ಜೀವ ಹೋಗಿದೆ ಎಂದು ತಿಳಿದು ಭರತ್, ರವಿ ಎಂಬುವವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಹಲ್ಲೆ ಮಾಡಿ, ಆ್ಯಕ್ಸಿಡೆಂಟ್ ಆಗಿದೆ ಎಂದು ಕತೆ ಕಟ್ಟಿದ್ದರು. ಆದರೆ ವಿಕ್ಕಿ ಮೇಲೆ ಹಲ್ಲೆ ಮಾಡಿ, ಎಸ್ಕೇಪ್ ಆಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತನಿಖೆ ನಡೆಸಿದ ಬಸವೇಶ್ವರ ನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.