ಕೊಡಗು : ನಾಲ್ಕು ಜನರ ಭೀಕರ ಕೊಲೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಪೋನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಡೆದಿದೆ.
ಗೀರಿಶ್ (35)ಎಂಬಾತನಿಂದ ಕೃತ್ಯ ನಡೆದಿದ್ದು, ಕರಿಯ (75), ಗೌರಿ (70), ನಾಗಿ (35), ಕಾವೇರಿ (7) ಕೊಲೆಯಾದ ನಾಲ್ವರು ಎಂದು ಗುರುತಿಸಲಾಗಿದೆ. ಕತ್ತಿಯಿಂದ ಕಡಿದು ಭೀಕರ ಹತ್ಯೆ ನಡೆಸಲಾಗಿದೆ.
ಆರೋಪಿ ಪರಾರಿಯಾಗಿದ್ದು, ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ಕಾಫಿ ತೋಟ ಲೈನ್ ಮನೆಯಲ್ಲಿ ಕುಟುಂಬ ವಾಸವಿದ್ದರು. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನೀಡಿದ್ದಾರೆ.

