ನೊಯ್ಡಾ: ಉತ್ತರ ಪ್ರದೇಶದ ಅಮೇಥಿಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಇಂದು (ಆಗಸ್ಟ್ 15) ತಿಳಿಸಿದ್ದಾರೆ. ಆಗಸ್ಟ್ 8ರಂದು (ಗುರುವಾರ) ಈ ಘಟನೆ ನಡೆದಾಗ ಮನೆಯಲ್ಲಿ ಆ ಹುಡುಗಿ ಒಬ್ಬಳೇ ಇದ್ದಳು. ಆಕೆ ಆಗಸ್ಟ್ 14ರಂದು ಸಂಜೆ (ಬುಧವಾರ) ಪೊಲೀಸರಿಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾರೆ ಎಂದು ಸರ್ಕಲ್ ಆಫೀಸರ್ ಅತುಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅತ್ಯಾಚಾರ ನಡೆಸಿದ ಆ ಹುಡುಗಿಯ ತಂದೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆತನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿರುವ ತನ್ನ ಸಹೋದರಿಯ ಮನೆಗೆ ಹೋಗಿದ್ದ ಆಕೆಯ ತಾಯಿ ಆಗಸ್ಟ್ 10ರಂದು (ಶನಿವಾರ) ನಿಧನರಾದರು. ಈ ಹಿನ್ನೆಲೆಯಲ್ಲಿ ಆ ಹುಡುಗಿ ದೂರು ನೀಡಲು ಬರುವುದು ತಡವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.