ಗುಡಿಬಂಡೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಡಿಬಂಡೆಯಲ್ಲಿ ನಡೆದಿದೆ.
ಬಾಲಾಜಿ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಬಾಲಾಜಿ ಸಿಂಗ್ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಒಂದೆರಡು ಕಾರು, ಮಿನಿ ಬಸ್ ಗಳನ್ನು ಇಟ್ಟುಕೊಂಡು, ಒಂದು ಫಿಶ್ ಅಕ್ವೇರಿಯಂ ಅಂಗಡಿಯನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದನು.
ಶೃತಿಬಾಯಿ ಎಂಬಾಕೆಯ ಜತೆ ವಿವಾಹವಾಗಿದ್ದ ಬಾಲಾಜಿಗೆ ಮತ್ತೊಬ್ಬ ಯುವತಿಯ ಜತೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಇದೇ ಕಾರಣ ಪತಿ – ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈತ ಇತ್ತೀಚೆಗೆ ಮಿನಿ ಬಸ್, ಕಾರುಗಳನ್ನು ಮಾರಾಟ ಮಾಡಿ ಸಾಲದ ಸುಳಿಗೆ ಸಿಲುಕಿಕೊಂಡು, ಬೇರೆಯವರ ಕಾರಿಗೆ ಚಾಲಕನಾಗಿ ಹೋಗುತ್ತಿದ್ದ ಎಂದು ಸ್ಥಳಿಯರು ತಿಳಿಸಿದ್ದು, ಪಟ್ಟಣದ ಬಾಪೂಜಿನಗರ ಅತನ ಖಾಲಿ ಇದ್ದ ಸ್ವಂತ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಗಣೇಶ್ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ.ತನಿಖೆ ನಂತರವೇ ಆತ್ಮಹತ್ಯೆಗೆ ಸೂಕ್ತ ಕಾರಣ ತಿಳಿಯಲಿದೆ.

