ಮೈಸೂರು: ಸರ್ಕಾರಿ ಕಚೇರಿ ಆವರಣ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಶೆಡ್ ನಿರ್ಮಿಸಿ ಹಸು ಸಾಕಾಣಿಕೆ ಮಾಡುತ್ತಿದ್ದ ಮಹಿಳೆಯನ್ನ ಪ್ರಶ್ನಿಸಿದ ಅಧಿಕಾರಿ ಮೇಲೆ ಹಲ್ಲೆ ನಡೆದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯ ಅಬ್ದುಲ್ ನಸೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ಸಂಸ್ಥೆಯ ಅಂಗ ಸಂಸ್ಥೆಯಾದ ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ನಡೆದಿದೆ.

ಉಪನಿರ್ದೇಶಕರಾದ ಮನು ಬಿ.ಕೆ.ರವರ ಮೇಲೆ ತಿರುಮತಿ ಎಂಬುವರು ಹಲ್ಲೆ ನಡೆಸಿದ್ದಾರೆ. ಶ್ರೀರಾಂಪುರದ ರಾಜ್ಯ ಸಂಪನ್ಮೂಲ ಕೇಂದ್ರದ ಕಚೇರಿಯ ಆವರಣದ ಗೋಡೆ ಒತ್ತುವರಿ ಮಾಡಿಕೊಂಡು ಪಾದಚಾರಿ ರಸ್ತೆಯಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿ ಹಸುಗಳನ್ನ ಸಾಕಣಿಕೆ ಮಾಡುತ್ತಿರುವ ತಿರುಮತಿ ಎಂಬ ಮಹಿಳೆ ಆಗಾಗ ಅಲ್ಲಿನ ಸಿಬ್ಬಂದಿಗಳಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ.

ಈ ಹಿನ್ನಲೆ ಉಪನಿರ್ದೇಶಕ ಮನು ರವರು ಕಚೇರಿಗೆ ಭೇಟಿ ನೀಡಿದಾಗ ಅಕ್ರಮವಾಗಿ ಒಳ ಪ್ರವೇಶಿಸಿದ ತಿರುಮತಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಣ್ಣು ಎರೆಚಿ ಅನಾಗರೀಕರಂತೆ ವರ್ತಿಸಿದ್ದಾಳೆ.ಈಕೆ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮನು ರವರು ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.