ಮೈಸೂರು: ತೋಟದ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಗಳನ್ನು ಹಗಲಿನಲ್ಲಿ ಕಾರ ಆಡಿಸುವ ಕಲ್ಲಿನಿಂದ ಜಜ್ಜಿ ಜೋಡಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲ್ಲೂಕಿನ ನಾಡಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೋಡಿ ಕೊಲೆ ಕಂಡು ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.

ಗ್ರಾಮದ ರಂಗಸ್ವಾಮಿ ಗೌಡ (65) ಪತ್ನಿ ಶಾಂತಮ್ಮ (52) ಕೊಲೆಯಾದ ಮೃತ ವೃದ್ಧ ದಂಪತಿಗಳು. ತೋಟದ ಮನೆಯಲ್ಲಿ ವಾಸವಿದ್ದ ರಂಗಸ್ವಾಮಿ ಗೌಡ ಮತ್ತು ಪತ್ನಿ ಶಾಂತಮ್ಮ ಎನ್ನಲಾಗಿದೆ. ಹಗಲಿನಲ್ಲೇ ತೋಟದ ಮನೆಯಲ್ಲಿದ್ದ ಕಾರ ಆಡಿಸುವ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಗಳನ್ನು ಕೊಲೆ ಮಾಡಲಾಗಿದೆ. ಕೊನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಪಿ ಎಸ ಐ ಲೋಲಾಕ್ಷಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.