ಸುಡಾನ್: ಶುಕ್ರವಾರ ಸುಡಾನ್’ನಲ್ಲಿ ಮಸೀದಿ ಮೇಲೆ ನಡೆದ ‘ಡ್ರೋನ್’ ದಾಳಿಯಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಸೇನೆ ತಿಳಿಸಿದ್ದು ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ.

ಸುಡಾನ್‌ ನ ಎಲ್-ಫಶರ್‌ನ ಮಸೀದಿಯ ಮೇಲೆ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು ಡ್ರೋನ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಮಸೀದಿ ಸಂಪೂರ್ಣವಾಗಿ ನಾಶವಾಗಿದೆ.

ದಾಳಿಯ ರಭಸಕ್ಕೆ ಇನ್ನೂ ಕೂಡ ಹಲವಾರು ಮಂದಿಯ ಶವಗಳು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿರುವುದರಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.