ಮೈಸೂರು: ಜೋಡಿ ಕೊಲೆ ಅಪರಾಧಿಗೆ ಉಸಿರಿರುವವರೆಗೂ ಜೀವಾವಧಿ ಶಿಕ್ಷೆ ಎಂದು ಮೈಸೂರು ನ್ಯಾಯಾಲಯದಿಂದ ಮತ್ತೊಂದು ಮಹತ್ವದ ತೀರ್ಪು ಹೊರಬಿದ್ದಿದೆ.

ನಂಜನಗೂಡು ತಾಲ್ಲೂಕು ಬಿಳುಗಲಿ ಗ್ರಾಮದಲ್ಲಿ ಕೊಲೆ ನಡೆದಿತ್ತು. ಆರೋಪಿ ರಂಗಸ್ವಾಮಿಗೆ ಉಸಿರಿರುವವರೆಗೂ ಜೀವಾವಧಿ ಶಿಕ್ಷೆಯಾಗಲಿದೆ. ಪಕ್ಕದ ಮನೆಯ ರಾಜೇಶ್ ಎಂಬಾತನ ಮೇಲೆ ದ್ವೇಷಕ್ಕೆ ಡಬಲ್ ಮರ್ಡರ್ ಮಾಡಲಾಗಿದೆ.

ರಾಜೇಶ್ ತಾಯಿ ಪುಟ್ಟರಂಗಮ್ಮ ಹಾಗೂ ಸಹೋದರಿ ಮಣಿ ಕೊಲೆ‌ಯಾಗಿದೆ. ಆಗಾಗ ರಂಗಸ್ವಾಮಿ ಪತ್ನಿ ವಿಚಾರವಾಗಿ ರಂಗಸ್ವಾಮಿ ರಾಜೇಶ್ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಪುಟ್ಟರಂಗಮ್ಮ ಹಾಗೂ ಮಣಿಯಿಂದ ನಿಂದನೆಯಾಗಿದ್ದು, ಇದರಿಂದ ಅವರ ಕೊಲೆಗೆ ಸಂಚು 15/6/2022 ರಂದು ಬೆಳಗ್ಗೆ ಪುಟ್ಟರಂಗಮ್ಮ ಮತ್ತು ಆಕೆಯ ಮಗಳು ಮಣಿ ಗದ್ದೆಗೆ ಹೋಗುತ್ತಿದ್ದಾಗ ಕೊಲೆಯಾಗಿದೆ.

ಅವರನ್ನು ಹಿಂಬಾಲಿಸಿ ತಾನು ಮೆದೆಯಲ್ಲಿ ಬಚ್ಚಿಟ್ಟಿದ್ದ ಮಚ್ಚನ್ನು ತೆಗೆದುಕೊಂಡು ಹಲ್ಲೆ ನಡೆಸಿ ಉಸಿರುಗಟ್ಟಿಸಿ ಇಬ್ಬರ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಇಬ್ಬರ ಹೆಣಗಳನ್ನು ಅಡ್ಡಹಳ್ಳದ ನೀರಿಗೆ ರಂಗಸ್ವಾಮಿ ಎಸೆದಿದ್ದ. ಅವರ ಬಳಿ ಇದ್ದ ಚಿನ್ನದ ಕಿವಿ ಗುಂಡು, ಓಲೆಗಳು, ಚಿನ್ನದ ಗುಂಡುಗಳು ಮತ್ತು ಮೂಗುತಿಗಳನ್ನು ಬಿಚ್ಚಿಕೊಂಡಿದ್ದನು.

ಸೀರೆಗಳಿಂದ ಹೆಣಗಳು ಮುಂದೆ ಹೋಗಬಾರದೆಂದು ಮರದ ಬೇರುಗಳಿಗೆ ಕಟ್ಟಿದ್ದನು. ಈ ಬಗ್ಗೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ನಂಜನಗೂಡು ಇನ್ಸಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ನಡೆಸಿದ್ದನು.

7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತೀರ್ಪು ನೀಡಲಾಗಿದೆ.ಅಪರಾಧಿಗೆ ಉಸಿರಿರುವವರೆಗೆ ಜೀವಾವಧಿ ಶಿಕ್ಷೆ 10 ಸಾವಿರ ದಂಡ ನೀಡಲಾಗಿದೆ. ಪಿಪಿ ಕೆ.ನಾಗರಾಜ ಸರ್ಕಾರದ ಪರ ವಾದ ಮಂಡಿಸಿದ್ದರು.