ಬಳ್ಳಾರಿ: ರೇಣುಕಾಸ್ವಾಮಿ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಲಿದೆ.

ಜೈಲಿನಲ್ಲಿ ಬೆಳಗಿನ ಉಪಹಾರ ಸೇವಿಸದೇ ಟೆನ್ಷನ್‌‌ನಲ್ಲಿ ಕುಳಿತಿದ್ದಾರಂತೆ. ಜೈಲು ಸಿಬ್ಬಂದಿಯಿಂದ ಜಾಮೀನು ಅರ್ಜಿಯ ತೀರ್ಪು ಯಾವಾಗ ಬರುತ್ತೆ ಎಂದು ಕೇಳಿದ್ದಾರೆ. ಟಿಫಿನ್ ಕೊಡಲು ಹೋಗಿದ್ದ ಸಿಬ್ಬಂದಿಗೆ ದರ್ಶನ್ ಕೇಳಿದ್ದಾರೆ. ಅದಕ್ಕೆ ನಮಗೂ ಗೊತ್ತಿಲ್ಲ ಎಂದು ಹೇಳಿ ಸಿಬ್ಬಂದಿ ವಾಪಸ್ ಬಂದಿದ್ದಾರೆ.

ಟೆನ್ಷನ್​​ನಲ್ಲಿರುವ ದರ್ಶನ್, ಜೈಲು ಅಧಿಕಾರಿಗಳ ಬಳಿ ಖಾಸಗಿ ಚಾನೆಲ್​ಗೆ ಬೇಡಿಕೆ ಇಟ್ಟಿದ್ದಾರೆ. ಜಾಮೀನು ಅರ್ಜಿಯ ತೀರ್ಪಿನ ಮಾಹಿತಿ ತಿಳಿಯಲು ಖಾಸಗಿ ಕನ್ನಡ ಚಾನೆಲ್​​ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.