Bengaluru 23°C
Ad

ರೇಣುಕಾ ಸ್ವಾಮಿ ಕೊಲೆ ಕುರಿತು ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ ದರ್ಶನ್ !

ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಅಂಡ್ ಗ್ಯಾಂಗ್​​ ವಿಚಾರಣೆ ಬಹುತೇಕ ಮುಗಿದಿದೆ. 3 ಬಾರಿ ಕಸ್ಟಡಿಗೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇವತ್ತು ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಕಸ್ಟಡಿ ಅಂತ್ಯ ಆಗಲಿದ್ದು, ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ. ಕಳೆದ ಎಂಟು ದಿನದಿಂದಲೂ ದರ್ಶನ್ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇವೆ.

Ad
300x250 2

ಇತ್ತೀಚೆಗಷ್ಟೆ ನ್ಯಾಯಾಲಯದ ಆದೇಶದಂತೆ ತಮ್ಮ ವಕೀಲರನ್ನು ದರ್ಶನ್ ಪೊಲೀಸ್ ಠಾಣೆಯಲ್ಲಿ ಭೇಟಿ ಮಾಡಿ ಪ್ರಕರಣದ ಬಗ್ಗೆ ಚುಟುಕಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ದರ್ಶನ್ ಪೊಲೀಸರ ಮುಂಚೆ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.

ಕೊಲೆಯಲ್ಲಿ ತಾವು ಭಾಗಿ ಆಗಿರುವ ವಿಷಯದಿಂದ ಹಿಡಿದು ಪ್ರಕರಣದಲ್ಲಿ ತಮ್ಮ ಹೆಸರು ಮುನ್ನೆಲೆಗೆ ಬರದಂತೆ ತಡೆಯಲು ಮಾಡಿದ್ದ ಪ್ರಯತ್ನ, ಪ್ರದೋಶ್​ಗೆ 30 ಲಕ್ಷ ರೂಪಾಯಿ ಹಣ ನೀಡಿದ್ದು, ಆ ನಂತರ ಪ್ರಭಾವಿಗಳನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವನ್ನೂ ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದವರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ದರ್ಶನ್ ಸಹ ಒಬ್ಬರಾಗಿದ್ದು, ಸ್ವ-ಇಚ್ಛೆ ಹೇಳಿಕೆ ದಾಖಲಿಸಿದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದೆಂಬ ನಿರೀಕ್ಷೆಯಿಂದ ಹಾಗೂ ಪೊಲೀಸ್ ಕಸ್ಟಡಿಯನ್ನು ಆದಷ್ಟು ಬೇಗ ಅಂತ್ಯಗೊಳಿಸುವ ದೃಷ್ಟಿಯಿಂದ ದರ್ಶನ್ ಹೀಗೆ ಮಾಡಿರಬಹುದು ಎನ್ನಲಾಗುತ್ತಿದೆ.

ಇನ್ನು ನಾಳೆ (ಜೂನ್ 20) ದರ್ಶನ್​ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು.

 

Ad
Ad
Nk Channel Final 21 09 2023
Ad