ಜೋಧಪುರ : ಟ್ರಕ್ ಹಾಗೂ ಟೆಂಪೋ ನಡುವೆ ಡಿಕ್ಕಿಯಾಗಿ ಐದು ಜನ ಸಾವನ್ನಪ್ಪಿರುವ ಘಟನೆ ಕಾರೀಬೇರಿ ಹಳ್ಳಿಯ NH125 ನಲ್ಲಿ ಘಟನೆ ನಡೆದಿದ್ದು, ಅವಘಡದಲ್ಲಿ 14 ಮಂದಿ ಗಾಯಗೊಂಡಿದ್ದು, ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಟೆಂಪೋದಲ್ಲಿ ಇರುವ ಎಲ್ಲರೂ ಹತ್ತಿದಲ್ಲಿದ್ದ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ಮಧ್ಯೆ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಅತಿವೇಗವೇ ಆಕ್ಸಿಡೆಂಟ್ ಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ವಾಹನ ನಜ್ಜುಗುಜ್ಜಾಗಿದೆ. ಗಾಯಳುಗಳು ಜೋಧಪುರ MDM ಆಸ್ಪತ್ರೆಗೆ ದಾಖಲಿಸಲಾಗಿದೆ.