ಹರಿಯಾಣ : ಹೋಮ್ ವರ್ಕ್ ಮಾಡಲಿಲ್ಲ ಅನ್ನೋ ಕಾರಣಕ್ಕೆ ಎರಡನೇ ತರಗತಿಯ ಮಗುವನ್ನು ಶಿಕ್ಷಕ ಮನಬಂದಂತೆ ಥಳಿಸಿ ಮೇಲಿನ ಮಹಡಿಯ ಕೋಣೆಗೆ ಕರೆದೊಯ್ದು ಹಗ್ಗಗಳಿಂದ ಕಿಟಕಿಗೆ ತಲೆಕೆಳಗಾಗಿ ನೇತು ಹಾಕಿರುವ ಘಟನೆ ಹರಿಯಾಣದ ಪಾಣಿಪತ್ ನ ಖಾಸಗಿ ಶಾಲೆಯಲ್ಲಿ ನಡೆದಿದೆ.
ಬಾಲಕನಿಗೆ ಪದೇ ಪದೇ ಕಪಾಳಮೋಕ್ಷ ಮಾಡಿ ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಕ್ಕೆ ಅಪ್ಲೋಡ್ ಮಾಡಲಾಗಿದೆ. ಬಾಲಕ ಎಷ್ಟೇ ಕೂಗಿದರು ಅವನನ್ನು ಬಿಟ್ಟಿಲ್ಲ. ಮೂವರು ಸಿಕಾಪಟ್ಟೆ ಹೊಡೆದಿದ್ದಾರೆ. ಇವರೆಲ್ಲರ ಟಾರ್ಚರ್ ಗೆ ಬಾಲಕ ನಿತ್ರಾಣಗೊಂಡಿದ್ದಾನೆ.
ಇನ್ನು ಈ ಘಟನೆಯಿಂದ ರೊಚ್ಚಿಗೆದ್ದ ಕುಟುಂಬ ಸದಸ್ಯರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ. ಘಟನೆಯ ಬಗ್ಗೆ ತನಗೆ ಏನೂ ತಿಳಿದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಶಿಕ್ಷಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಬಾಲಕನನ್ನು ರಕ್ಷಣೆ ಮಾಡಲಾಗಿದೆ.

