ಹಾಸನ: ಗಾಂಜಾ ಮತ್ತಿನಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ನಗರದ ಹೊರವಲಯದ ಚನ್ನಪಟ್ಟಣದ ಖಾಲಿ ಜಾಗದಲ್ಲಿ ಡಿ. 8 ರಂದು ನಡೆದಿತ್ತು.

ಕೀರ್ತಿ ಎಂಬ ಯುವಕನ ಕೊಲೆ ಪ್ರಕರಣ ಸಂಬಂಧ ಸ್ಥಳ ಮಹಜರನ್ನು ಪೊಲೀಸರು ನಡೆಸಿದ್ದಾರೆ. ಸ್ಥಳ ಮಹಜರು ವೇಳೆ ಕೀರ್ತಿ ಮೇಲೆ ಎತ್ತಿ ಹಾಕಿದ ದೊಡ್ಡ ಕಲ್ಲನ್ನು ಆರೋಪಿ ಉಲ್ಲಾಸ್ ತೋರಿಸಿದ್ದಾನೆ.

ಶವದ ಮುಂದೆ ಸೆಲ್ಫಿ ಮಾಡಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.