ಮೈಸೂರು : ಯುವಕನ ಬರ್ಬರ ಕೊಲೆಯಾಗಿರುವ ಘಟನೆ ಮೈಸೂರಿನ ವರುಣ ಗ್ರಾಮದ ಹೊರವಲಯದ ಹೋಟೆಲ್ ನಡೆದಿದೆ. ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈತ ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿಯಾಗಿದ್ದಾನೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 5 ಜನರ ತಂಡದಿಂದ ದುಷ್ಕೃತ್ಯ ನಡೆದಿದೆ. ನೆನ್ನೆ ತಡರಾತ್ರಿ ಕೊಲೆ ನಡೆದಿದೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಕಾರ್ತಿಕ್ ಹಾಗೂ ಗಾಯಿತ್ರಿ ಪುರಂ ನಿವಾಸಿ ಪ್ರವೀಣ್ ನಡುವೆ ನಾಲ್ಕೈದು ತಿಂಗಳ ಹಿಂದೆ ಗಲಾಟೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಪ್ರವೀಣ್ ಕೊಲೆ ಮಾಡೋ ದಮ್ಕಿಯನ್ನು ರೌಡಿಶೀಟರ್ ಕಾರ್ತಿಕ್ ಹಾಕಿದ್ದರು.

ಕೊಲೆ ಮಾಡ್ತಾನೆ ಅನ್ನೋ ಭಯದಲ್ಲೇ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಕೇಸ್ ನಲ್ಲಿ ಜೈಲು ಸೇರಿ ಬೇಲ್ ಮೇಲೆ ಕಾರ್ತಿಕ್ ಹೊರಬಂದಿದ್ದನು. ಸ್ಕೆಚ್ ಹಾಕಿ ಪ್ರವೀಣ್ ಗ್ಯಾಂಗ್ ಕಾರ್ತಿಕ್ ನನ್ನು ಕೊಲೆ ಮಾಡಿದ್ದಾರೆ.