ಹಾಸನ : ಯುವಕನ‌ ಬರ್ಬರ ಹತ್ಯೆ  ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ. ಕೊಲೆಗೈದು ಶವದ ಎದುರು ಸೆಲ್ಫಿ ಪಾತಕಿಗಳು ವಿಡಿಯೋ ಮಾಡಿದ್ದಾರೆ. ಕಲ್ಲು ಎತ್ತಿಹಾಕಿ ಯುವಕನ ಭೀಕರ‌ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿದ್ದೇವೆ ಎಂದು ಕೊಲೆಗಡುಕರು ವಿಡಿಯೋ ಹರಿಬಿಟ್ಟಿದ್ದಾರೆ.

ನೋಡಿ ನಾವು ಮರ್ಡರ್ ಮಾಡಿದ್ದೇವೆ. ಇವನನ್ನು ಸಾಯಿಸಿದ್ದೇವೆ ಎಂದು ಶವ ತೋರಿಸಿಕೊಂಡು ಸೆಲ್ಫಿ ವಿಡಿಯೋವನ್ನು ಆರೋಪಿಗಳು ಮಾಡಿದ್ದಾರೆ. ಗಾಂಜಾ ನಶೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಶವಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.