ಮೈಸೂರು : ಮನೆ ಗೋಡೆ ವಿಚಾರಕ್ಕೆ ತಮ್ಮನಿಂದ ಅಣ್ಣ, ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸಾಲಿಗ್ರಾಮ ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಕಾಮಾಕ್ಷಮ್ಮ. ಶ್ರೀಕಂಠೇಗೌಡ ಹಲ್ಲೆಗೊಳಗಾದ ದಂಪತಿ. ಸಹೋದರ ದಶರಥ, ಪುತ್ರ ಶಂಕರೇಗೌಡ ಆಲಿಯಾಸ್ ವಿದ್ಯಾ, ಸಂಬಂಧಿ ಹಂಡ್ರಂಗಿ ಗ್ರಾಮದ ಸಂದೀಪ್ ಸೇರಿ ಹಲವರಿಂದ ಹಲ್ಲೆ ನಡೆಸಲಾಗಿದೆ.
ತನ್ನ ಭಾಗದಲ್ಲಿರೋ ಮರ ತೆರವು ಮಾಡಲು ತಮ್ಮ ದಶರಥ ತಡೆಯೊಡ್ಡಿದ್ದನು. ಮರ ಮನೆ ಮೇಲೆ ಬೀಳುತ್ತದೆ ತೆರವು ಮಾಡಬೇಕು ಎಂದು ಕೇಳಿಕೊಂಡರು ತಡೆಯೊಡ್ಡಿದ್ದರು. ಬಳಿಕ ಹಲ್ಲೆಗೊಳಗಾದ ಶ್ರೀಕಂಠೇಗೌಡ ಸಹೋದರ ದಶರಥ ಗೋಡೆ ಪ್ಲಾಸ್ಟರಿಂಗ್ ಮಾಡಿಸಲು ಮುಂದಾಗಿದ್ದರು.
ಪ್ಲಾಸ್ಟಿಂಗ್ ಗೆ ಅಣ್ಣ ಶ್ರೀಕಂಠೇಗೌಡ ತಡೆಯೊಡ್ಡಿದ್ದಕ್ಕೆ ದಪಂತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮೊದಲು ಮರ ತೆರವು ಮಾಡಲು ಬಿಡು ಆಮೇಲೆ ಪ್ಲಾಸ್ಟರಿಂಗ್ ಮಾಡಿಕೊ ಎಂದಿದ್ದಕ್ಕೆ ಸಹೋದರ, ಸಂಬಂಧಿಗಳಿಂದ ಹಲ್ಲೆ ನಡೆಸಲಾಗಿದೆ.
ಮಚ್ಚು, ರಾಡು, ಕಟ್ಟಿಗೆಯಿಂದ ಮನಬಂದಂತೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಇಷ್ಟಾದರೂ ಕೇಸ್ ದಾಖಲಿಸಲು ಸಾಲಿಗ್ರಾಮ ಪೊಲೀಸರ ಹಿಂದೇಟು ಹಾಕುತ್ತಿದ್ದಾರೆ.

