ಕಾರವಾರ: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯೊಬ್ಬರನ್ನು ಬೆಳ್ಳಂಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ವ್ಯಕ್ತಿ. ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ನಡೆದ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಾಕೆಯನ್ನ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

