ಹುಬ್ಬಳ್ಳಿ: ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷನ ಪತ್ರನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಶೇಖರಯ್ಯ ಮಠಪತಿ ಮಗ ಆಕಾಶ ಮಠಪತಿ (25) ಎಂಬಾತನನ್ನು ಆತನ ಸ್ನೇಹಿತರೇ ಇಲ್ಲಿನ ಆರ್.ಎಂ. ಲೋಹಿಯಾ ನಗರದ ಶಾಲೆಯೊಂದರ ಹಿಂಭಾಗದ ಬಯಲು ಜಾಗದಲ್ಲಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಮಧ್ಯಾಹ್ನ ಲೋಹಿಯಾ ನಗರ ಹಿಂಭಾಗದ ಮಿಡ್ ಮ್ಯಾಕ್ ಲೇಔಟ್ ನಲ್ಲಿ ಸ್ನೇಹಿತರು ಕೂಡಿಕೊಂಡು ಆಟವಾಡುತ್ತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾದಾಗ ಅದು ವಿಕೋಪಕ್ಕೆ ಹೋಗಿದೆ. ಇದೇ ವೇಳೆ ಹಲ್ಲೆ ನಡೆದಿದ್ದು, ಆಕಾಶ ಮಠಪತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.