ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿಗೆ ಚಾಕು ಇರಿದ ಘಟನೆ ಚನ್ನಪಟ್ಟಣ ನಗರದ ತುಳಸಿತೋಟದ ಬೀದಿಯಲ್ಲಿ ನಡೆದಿದೆ.
ಶ್ವೇತಾ (32) ಚಾಕು ಇರಿತಕ್ಕೊಳಗಾದ ಪತ್ನಿ. ಅರವಿಂದ್ ಪತ್ನಿಗೆ ಚಾಕು ಇರಿದಿರುವ ವ್ಯಕ್ತಿ. ಕೌಟುಂಬಿಕ ಕಲಹ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ಅರವಿಂದ್ ಮತ್ತು ಶ್ವೇತಾ ಬೇರೆ ಬೇರೆ ಇದ್ದರು.
ಆದರೆ ಇಂದು ಕುಡಿದು ಹೆಂಡತಿ ಜೊತೆ ಅರವಿಂದ್ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯ ಕುತ್ತಿಗೆ ಭಾಗಕ್ಕೆ ಚಾಕು ಇರಿದಿದ್ದಾನೆ. ಪತ್ನಿಯನ್ನ ಕೊಲೆ ಮಾಡಲು ಯತ್ನಿಸಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡ ಶ್ವೇತಾಗೆ ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಅತ್ತ ಕೊಲೆ ಮಾಡಲು ಯತ್ನಿಸಿದ ಪತಿ ಅರವಿಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

