ನಂಜನಗೂಡು : ರೌಡಿಶೀಟರ್ ಧನರಾಜ್ ಭೋಲಾ ಮೇಲೆ ಅಟ್ಯಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಡೆದು 14 ದಿನಗಳ ನಂತರ ಆರೋಪಿ ಸಿಕ್ಕಿಬಿದ್ದಿದ್ದಾನೆ. ರವಿ.@.ಟ್ರಾವಿ ಬಂಧಿತ ಆರೋಪಿ. ಚಾಮರಾಜನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಪೊಲೀಸರ ಅತಿಥಿಯಾಗಿದ್ದಾನೆ. ನವೆಂಬರ್ 21 ರಂದು ಧನರಾಜ್ ಭೋಲಾ ಮೇಲೆ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಹಲ್ಲೆ ನಡೆಸಿದವರ ಪೈಕಿ ರಘು ಹಾಗೂ ಕಾರ್ತಿಕ್ ಎಂಬುವರನ್ನ ಪೊಲೀಸರು ಬಂಧಿಸಿದ್ದರು.

ರವಿ ತಲೆಮರೆಸಿಕೊಂಡಿದ್ದ. ಆರೋಪಿ ರವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅಟ್ಯಾಕ್ ನಡೆದ ಸಂದರ್ಭದಲ್ಲಿ ಧನರಾಜ್ ಭೋಲಾನ ಹಿಡಿದಿದ್ದ ರವಿಗೆ ಆಯತಪ್ಪಿ ಲಾಂಗ್ ಏಟು ಬಿದ್ದಿದೆ. ರಘು ಬೀಸಿದ ಏಟು ಆಯತಪ್ಪಿ ರವಿ ಕೈಗೆ ಬಿದ್ದ ಪರಿಣಾಮ ಎರಡು ಬೆರಳುಗಳು ಕಟ್ ಆಗಿದೆ. ಅಂದಿನಿಂದ ತಲೆ ಮರೆಸಿಕೊಂಡಿದ್ದ ರವಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದಿದ್ದಾನೆ.