ಅಮೆರಿಕ: ಐಫೋನ್ ವಿಚಾರವಾಗಿ 12 ವರ್ಷದ ಬಾಲಕಿಯೊಬ್ಬಳು ತನ್ನ 8 ವರ್ಷದ ಸಹೋದರಯನ್ನು ಕೊಂದಿರುವ ಘಟನೆ ಅಮೆರಿಕದ ಟೆನ್ನೆಸ್ಸಿಯಲ್ಲಿ ನಡೆದಿದೆ.

ಐಫೋನ್ ವಿಚಾರವಾಗಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದ್ದು, ಈ ವೇಳೆ ಬಾಲಕಿ ತನ್ನ ತಂಗಿಯ ಕತ್ತು ಹಿಸುಕಿ ಕೊಂದಿದ್ದಾಳೆ. ಇದಲ್ಲದೇ ಯಾರೂ ತನ್ನನ್ನು ಅನುಮಾನಿಸಬಾರದೆಂದು, ಅವಳು ತನ್ನ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದ್ದಾಳೆ.

ಆದರೆ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ಸೆರೆಯಾಗಿದ್ದು, ಈ ದೃಶ್ಯ ಕಂಡು ಬಾಲಕಿಯ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಮೃತ ಬಾಲಕಿ ಡೆಮಾರಿಯಾ ಹೋಲಿಂಗ್ಸ್‌ವರ್ತ್(8) ಎಂದು ಗುರುತಿಸಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಬಾಲಕಿಯನ್ನು ಬಂಧಿಸಿದ್ದಾರೆ. ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣದಡಿಯಲ್ಲಿ ಬಾಲಕಿಯ ವಿರುದ್ಧ ಕೇಸು ದಾಖಲಿಸಲಾಗಿದೆ.