ಮಂಗಳೂರು : ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಶಾಹಿತ್ ಯಾನೆ ಸಾಹಿತ್ (24), ಅಮ್ಮುಂಜೆ ಗ್ರಾಮದ ನಿವಾಸಿಯಾಗಿ ಗುರುತಿಸಲಾಗಿದೆ.

ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕೊಲೆ ಘಟನೆ ಮೇ 27ರಂದು ನಡೆದಿದೆ – ಅಬ್ದುಲ್ ರಹ್ಮಾನ್ ಅವರನ್ನು ಮಾರಕಾಯುಧಗಳಿಂದ ಹತ್ಯೆಗೊಳಿಸಲಾಗಿತ್ತು. ಅವರ ಸ್ನೇಹಿತ ಕಲಂದರ್ ಶಾಫಿ ಮೇಲೆ ಗಂಭೀರ ಹಲ್ಲೆ ನಡೆಸಲಾಗಿತ್ತು.

ಈ ಹಿಂದಿನ ತನಿಖೆಯಲ್ಲಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗೆ ಬಂಧಿತ ಶಾಹಿತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಈತನನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ತನಿಖೆ ಮುಂದುವರಿದಿದೆ.