ಮೈಸೂರು: ಹೆಚ್.ಡಿ. ಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ಎಲೆಹುಂಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಶೀಲ ಎಂಬುವರ ಮೇಲೆ ಬಸವರಾಜು ಎಂಬ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಅಂಗನವಾಡಿಯ ಕಾರ್ಯಕರ್ತೆ ಸುಶೀಲ ಮಕ್ಕಳಿಗೆ ಪಾಠ ಮಾಡುತ್ತಿದ್ದ ವೇಳೆ ಅಂಗನವಾಡಿಗೆ ಬಂದ ಬಸವರಾಜು ಎಂಬ ವ್ಯಕ್ತಿ ಶಿಕ್ಷಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದು, ತದನಂತರ ಬಸವರಾಜು ಶಿಕ್ಷಕಿ ಸುಶೀಲ ಕಪಾಲಕ್ಕೆ ಹೊಡೆದ ಪರಿಣಾಮ ಅಂಗನವಾಡಿ ಕಾರ್ಯಕರ್ತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಸವರಾಜು ಅಂಗನವಾಡಿಯಿಂದ ಪರಾರಿಯಾಗಿದ್ದಾನೆ.

ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯನ್ನು ಹೆಗ್ಗಡದೇವನಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ . ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.