ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಹುಣಸೂರು ತಾಲ್ಲೂಕಿನ ಗುರುಪುರ ಗ್ರಾಮದ ಬಾರ್ ಒಂದರ ಬಳಿ ನಡೆದಿದೆ.

ರವಿ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಸುನಿಲ್ ಎಂಬಾತ ಚಾಕುವಿನಿಂದ ಇರಿದ ಆರೋಪಿಯಾಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಗುರುಪುರದ ಬಾರ್ ಒಂದರಲ್ಲಿ ರವಿ ಹಾಗೂ ಸ್ನೇಹಿತ ಅಭಿಷೇಕ್ ಮಧ್ಯಪಾನ ಮಾಡುವ ವೇಳೆ ಆರೋಪಿ ಸುನಿಲ್ ತನ್ನಿಬ್ಬರು ಸಹಚರರ ಜೊತೆ ಬಂದು ಜಾತಿನಿಂದನೆ ಮಾಡಿ ಕ್ಯಾತೆ ತೆಗೆದಿದ್ದಾನೆ.

ಬಾರ್ ನಿಂದ ಹೊರಬಂದ ರವಿಯನ್ನ ಹಿಂಬಾಲಿಸಿದ ಸುನಿಲ್ ಚಾಕುವಿನಿಂದ ಇರಿದಿದ್ದಾನೆ.ಗಾಯಗೊಂಡ ರವಿಯನ್ನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ಸುನಿಲ್ ನನ್ನು ಬಂಧಿಸಿದ್ದಾರೆ.