ಚಿಕ್ಕಬಳ್ಳಾಪುರ: ಮೂರು ವರ್ಷದ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗೌತಮ್ (3) ಸ್ವತಃ ಚಿಕ್ಕಪ್ಪನಿಂದಲೇ ಕೊಲೆಯಾದ ಬಾಲಕ. ಬಾಲಕನ ಚಿಕ್ಕಪ್ಪ ರಂಜಿತ್​ (30)ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿದ ರಂಜಿತ್ ಕಾಡಿನಲ್ಲಿ ಅವಿತುಕೊಂಡಿದ್ದನು. ರಾತ್ರಿಯಿಡೀ ಕಾಡಿನಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಶಿರಿಷಾ ಹಾಗೂ ಮಂಜುನಾಥ್ ದಂಪತಿಗಳ ಪುತ್ರ ಮೂರು ವರ್ಷದ ಗೌತಮ್​​ನನ್ನು ಪಾಳುಬಿದ್ದ ಮನೆಗೆ ಕರೆದೊಯ್ದು ಕತ್ತು ಸೀಳಿದ್ದನು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಆರೋಪಿ ರಂಜಿತ್ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಪ್ರಕರಣ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.