ಗುಂಡ್ಲುಪೇಟೆ: ಮದ್ಯ ತರಲು ಹೋದ ಗಾರೆ ಕೆಲಸಗಾರನ ಕೊಲೆಯಾಗಿರುವ ಘಟನೆ ಗುಂಡ್ಲುಪೇಟೆ ಪಟ್ಟಣದ ಮದ್ದಾನೇಶ್ವರ ಶಾಲೆ ಬಳಿ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ನಿವಾಸಿ ಶಿವು (35) ಮೃತ ದುರ್ದೈವಿ. ಸೋಮವಾರ ರಾತ್ರಿ ಮದ್ಯ ತರಲು ಬಾರ್ ಗೆ ತೆರಳಿದ್ದ ವೇಳೆ ರಸ್ತೆಯಲ್ಲಿ ಅಪರಿಚಿತರ ಜೊತೆ ಗಲಾಟೆ ನಡೆದಿದೆ. ಇಬ್ಬರು ಯುವಕರಿಂದ ಶಿವು ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ಮಾಡಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಶಿವು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮಹಮದ್ ನಿಜಾಮುದ್ದೀನ್ ಎಂಬಾತನನ್ನ ಬಂಧನ ಮಾಡಲಾಗಿದೆ. ಗುಂಡ್ಲುಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

