ಮೈಸೂರು : ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಬರ್ಬರ ಹತ್ಯೆ ಮಾಡಿರುವ ಘಟನೆ ಹುಣಸೂರು ಪಟ್ಟಣದ ಶಬ್ಬೀರ್ ನಗರದಲ್ಲಿ ನಡೆದಿದೆ.
ಕಿದರ್ ಪಾಷ (55) ಹತ್ಯೆಯಾದ ವ್ಯಕ್ತಿ. ಕೆ.ಆರ್.ನಗರ ತಾಲೂಕಿನ ಹೊನ್ನೆನಹಳ್ಳಿ ನಿವಾಸಿಯಾಗಿದ್ದು, ಕಿದರ್ ಪಾಷಾನನ್ನು ಅಟ್ಟಾಡಿಸಿಕೊಂಡು ಎಜಾಜ್ ಮತ್ತು ಸಂಗಡಿಗರು ಕೊಂದಿದ್ದಾರೆ.
ಕಾರಿನಲ್ಲಿ ಕುಳಿತಿದ್ದ ಕಿದರ್ ಪಾಷ. ಸ್ವಲ್ಪ ಮಾತಾಡಬೇಕು ಹೊರಗೆ ಬಾ ಎಂದು ಕರೆದು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಓಡಿದರೂ ಬಿಡದೆ ಅಟ್ಟಾಡಿಸಿಕೊಂಡು ಕೊಂದ ಆರೋಪಿಗಳು.
ಮೃತನ ಜೊತೆಯಲ್ಲಿ ಇದ್ದ ಸಂಬಂಧಿ ಉಮ್ಮರುದ್ದೀನ್ ಖಾನ್ ಬಿಡಿಸಲು ಹೋದ ವೇಳೆ ಆತನ ಮೇಲೂ ಹಲ್ಲೆ ಮಾಡಲಾಗಿದೆ. ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

