ಕಲಬುರಗಿ: ಕಲಬುರಗಿಯಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಶವ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಗಾಂವ್ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ರಾಜ್ ಕುಮಾರ್ ಬಂಧಿತ ಕೊಲೆ ಆರೋಪಿಯಾಗಿದ್ದಾನೆ. ರಾಜ್‌ಕುಮಾರ್‌ ಊಟ ಕೊಡಿಸುವ ನೆಪದಲ್ಲಿ ಬಸ್ಸಮ್ಮ ಎಂಬಾಕೆಯನ್ನು ಕರೆದೊಯ್ದು ಕೊಲೆ ಮಾಡಿದ್ದನು. ಕೊಲೆ ಬಳಿಕ ಪೆಟ್ರೋಲ್ ಹಾಕಿ ಸುಟ್ಟು ರಸ್ತೆ ಬದಿಯಲ್ಲಿ ಶವ ಹೂತಿಟ್ಟು ಪರಾರಿಯಾಗಿದ್ದಾನೆ.

ಬಸ್ಸಮ್ಮ ಈ ರಾಜಕುಮಾರ್ ಬಳಿ ಚಿನ್ನಾಭರಣವನ್ನು ಅಡವಿಟ್ಟಿದ್ದಳು ಜತೆಗೆ ಹಣವನ್ನು ಕೊಟ್ಟಿದ್ದಳು. ಬಸ್ಸಮ್ಮ ಕೊಟ್ಟ ಚಿನ್ನವನ್ನು ರಾಜುಕುಮಾರ್‌ ಮತ್ತೊಬ್ಬರ ಬಳಿ ಅಡವಿಟ್ಟಿದ್ದ. ಕೆಲ ದಿನಗಳ ಬಳಿಕ ಬಸ್ಸಮ್ಮ, ರಾಜಕುಮಾರ್‌ಗೆ ಚಿನ್ನಾಭರಣ ಹಾಗೂ ಹಣವನ್ನು ನೀಡುವಂತೆ ಕೇಳಿದ್ದಳು.

ಆದರೆ ಬೇರೊಬ್ಬರ ಬಳಿ ಚಿನ್ನ ಅಡವಿಟ್ಟ ಕಾರಣಕ್ಕೆ ರಾಜಕುಮಾರ್‌, ಬಸ್ಸಮ್ಮಳನ್ನು ಕೊಂದು ಮುಗಿಸಲು ಸ್ಕೆಚ್‌ ಹಾಕಿದ್ದ. ಅದರಂತೆ ಜುಲೈ 14 ರಂದು ಮಾರ್ಕೆಟ್‌ನಿಂದ ಊಟ ಕೊಡಿಸುವ ನೆಪದಲ್ಲಿ ಕರೆದೊಯ್ದು ಗುರುತು ಸಿಗದಂತೆ ಸುಟ್ಟು ಹಾಕಿದ್ದಾನೆ.

ಮಹಾಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಚಿನ್ನಾಭರಣ ಹಾಗೂ ಹಣಕಾಸು ವಿಷ್ಯಕ್ಕೆ ಹತ್ಯೆ ನಡೆದಿರುವುದು ಗೊತ್ತಾಗಿದೆ. ಮಹಾಗಾವ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.