ಛತ್ತೀಸ್‌ ಗಡ : ಛತ್ತೀಸ್‌ ಗಡದಲ್ಲಿ ಕೆಂಪು ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿವೆ. ಬಿಜಾಪುರ ಜಿಲ್ಲೆಯ ಕಾರೆಗುಟ್ಟದಲ್ಲಿ ಅಡಗಿದ್ದ 3 ನಕ್ಸಲರನ್ನು ಹೊಡೆದುರುಳಿಸಲಾಗಿದೆ.

ಛತ್ತೀಸ್‌ ಗಡ ಹಾಗೂ ತೆಲಂಗಾಣ ಬಾರ್ಡರ್ ನಲ್ಲಿ ನಕ್ಸಲರು ಅಡಗಿ ಕುಳಿತಿದ್ದ ವಿಷಯ ತಿಳಿದು ಕಾರ್ಯಚರಣೆ ನಡೆಸಲಾಯ್ತು. ಈ ವೇಳೆ ಕಾಡು ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯಿತು ಅಂತಿಮವಾಗಿ 3 ಮಂದಿಯನ್ನು ಹೊಡೆದುರುಳಿಸಲಾಗಿದೆ.

ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಕೆಲ ಶಸ್ತ್ರಗಳನ್ನು ಸೀಜ್ ಮಾಡಲಾಗಿದೆ. ಕಾರ್ಯಚರಣೆ ಇನ್ನೂ ಸಹ ಮುಂದುವರಿದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ನಕ್ಸಲರು ಇರೋ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.