ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಮೆರೆದ ಕಾರಣ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ನಿನ್ನೆ ಸ್ಥಳಾಂತರಿಸಲಾಗಿದೆ. ಆದರೆ ಸ್ಥಳಾಂತರದ ವೇಳೆ ದರ್ಶನ್ ನೀಲಿ ಜೀನ್ಸ್, PUMA ಟೀ-ಶರ್ಟ್ ಮತ್ತು ಕೂಲಿಂಗ್ ಗ್ಲಾಸ್, ಕೈಯಲ್ಲೊಂದು ಶರ್ಟ್ ಹಿಡಿದುಕೊಂಡು ಜೈಲಿಗೆ ಬಂದಿದ್ದಾರೆ.
ಜೈಲಿಗೆ ಬರುವ ವೇಳೆ A2 ಆರೋಪಿ ದಾಸ ಪುಸ್ತಕಗಳನ್ನು ಹಿಡಿದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ದರ್ಶನ್ ಜೈಲಿನಲ್ಲಿ ಓದಲು ಸುಮಾರು 20 ಪುಸ್ತಕಗಳನ್ನು ಹಿಡಿದುಕೊಂಡು ಬಳ್ಳಾರಿ ಜೈಲಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳು ಸೇರಿವೆ ಎನ್ನಲಾಗುತ್ತಿದೆ. ಜೈಲಿನಲ್ಲಿ ಬಿಡುವಿನ ಸಮಯದಲ್ಲಿ ಓದಲು ಎಂದು ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಬಳ್ಳಾರಿಗೆ ಜೈಲಿಗೆ ಬಂದ ದರ್ಶನ್ಗೆ ಪರಪ್ಪನ ಅಗ್ರಹಾರದ ಜೈಲು ಸಿಬ್ಬಂದಿಗಳು ನಟನಿಗೆ ಸೇರಿದ ವಸ್ತುಗಳನ್ನು ಬ್ಯಾಗ್ನಲ್ಲಿ ತುಂಬಿಸಿ ಕೊಟ್ಟಿದ್ದಾರೆ. ಈ ವೇಳೆ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಸುಮಾರು 20 ಪುಸ್ತಕಗಳನ್ನು ದರ್ಶನ್ ಓದಲು ಬಳ್ಳಾರಿ ಜೈಲಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಪುಸ್ತಕಗಳನ್ನು ಕುಟುಂಬಸ್ಥರು ಮತ್ತು ಸ್ನೇಹಿತರು ಭೇಟಿ ನೀಡುವ ಸಮಯದಲ್ಲಿ ನೀಡಿದ್ದರು ಎನ್ನಲಾಗುತ್ತಿದೆ.

