ಮಂಗಳೂರು: ಡಾ.ಎಸ್.ಪಿ.ಬಿ ಫ್ಯಾನ್ಸ್ ಅಸೋಸಿಯೇಶನ್ ಮಂಗಳೂರು-ಉಡುಪಿ ಇವರ ವತಿಯಿಂದ ಸಂಗೀತ ಲೋಕದ ಸಾರ್ವಭೌಮ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯರವರ 78ನೇ ಜನ್ಮದಿನದ ಅಂಗವಾಗಿ ಕರಾವಳಿಯ ಎಲ್ಲಾ ಗಾಯಕರ ಸಮಾಗಮದಲ್ಲಿ “ಎದೆ ತುಂಬಿ ಹಾಡುವೆವು ಡಾ.ಎಸ್ ಪಿಬಿ ಸವಿ ನೆನಪಿನಲ್ಲಿ” ಸಂಗಿತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೇ ಜೂನ್ 4ರಂದು ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾಗಿ ಶ್ರೀಯುತ ಎಸ್ ಮಹೇಶ್ ಕುಮಾರ್ ಡಿ.ವೈ.ಎಸ್ ಪಿ ಮಡಿಕೇರಿ., ಶ್ರೀಯುತ ಠಾಗೂರ್ ದಾಸ್ ಪ್ರಸಿದ್ದ ಹಿರಿಯ ಗಾಯಕರು. ಕೆ.ಕೆ ನೌಶದ್ ಶಾಡ್ಸ್ ಮ್ಯೂಸಿಕ್ ವಲ್ಡ್. ಶ್ರೀಯುತ ದಿನೇಶ್ ಶೆಟ್ಟಿ ಮಾಳ ಉದ್ಯಮಿಗಳು ಮುಂಬೈ, ಶ್ರೀಯುತ ಕರುಣಾಕರ್ ಶೆಟ್ಟಿ ಮಾಳ ಉದ್ಯಮಿಗಳು ಮುಂಬೈ., ಸದಾಶಿವ ದಾಸ್, ಜಗದೀಶ್ ಶೆಟ್ಟಿ, ಸೋನಿಯಾ ಎಸ್ ಅಂಚನ್, ಶೋಭಾ ದೇವಾಡಿಗ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬಳಿಕ ಎಸ್ ಪಿ ಹಿಟ್ಸ್ ಕರೋಕೆ ಸಗೀತ ಸ್ಪರ್ಧೆ ನಡೆಯಲಿದೆ. ಪ್ರಥಮ ಬಹುಮಾನವಾಗಿ 10,000ಸಾವಿ ನಗದು ಹಾಗು ಶಾಶ್ವತ ಫಲಕ, ದ್ವಿತೀಯ ಬಹುಮಾನ 7.000 ನಗದು ಹಾಗು ಶಾಶ್ವತ ಫಲಕ ಹಾಗು ತೃತೀಯ ಬಹುಮಾನ 5,000 ನಗದು ಮತ್ತು ಶಾಶ್ವತ ಫಲಕ ಸಿಗಲಿದೆ.

ಸ್ವರ್ಧಿಗಳು ಬೆಳಿಗ್ಗೆ 9;30 ರ ಒಳಗೆ ಹಾಜರಿರಕ್ಕದ್ದು ಹಾಗು ಬಹುಮಾನ ವಿತರಣೆ ಸಂದರ್ಭದಲ್ಲಿ ವಿಜೇತರು ಸ್ಥಳದಲ್ಲಿ ಇಲ್ಲದ ಪಕ್ಷದಲ್ಲಿ ಅವರ ಹೆಸರನ್ನು ಕೈಬಿಡಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8095436962, 9606802952 ಗೆ ಸಂಪರ್ಕಿಸಬಹುದು.

