Bengaluru 23°C
Ad

ಕಂಬಳಬೆಟ್ಟುವಿನಲ್ಲಿ ದರ್ಸ್ ಪುನರಾರಂಭ ಹಾಗೂ ಕ್ಯಾಂಟೀನ್ ಕಟ್ಟಡ ಉದ್ಘಾಟನೆ

Dars

ವಿಟ್ಲ: ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತಿನ ಅಧೀನದಲ್ಲಿ ಮೇ. 28 ರಂದು ಝೈನುಲ್ ಉಲಮಾ ಮಾಣಿ ಹಮೀದ್ ಮುಸ್ಲಿಯಾರ್ ಅವರು ದರ್ಸ್ ವಿದ್ಯಾಭ್ಯಾಸ ಕೇಂದ್ರ ಹಾಗೂ ಕ್ಯಾಂಟೀನ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಝೈನುಲ್ ಉಲಮಾ ಮಾಣಿ ಹಮೀದ್ ಮುಸ್ಲಿಯಾರ್ ಅವರು,  ದರ್ಸ್ ವಿದ್ಯಾಭ್ಯಾಸದ ಮಹತ್ವ ಹಾಗೂ ಅದಕ್ಕೆ ಸಹಕರಿಸಿದವರಿಗೆ ಇಹ ಮತ್ತು ಪರ ಲೋಕದಲ್ಲಿ ಅಲ್ಲಾಹನು ಅನುಗ್ರಹಿಸುವ ಪ್ರತಿಫಲದ ವಿಶಾಲತೆ ಬಗ್ಗೆ ವಿವರಿಸಿ, ಸ್ಥಳೀಯರು ಹೆಚ್ಚು ಈ ಸಂಭ್ರಮವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಒತ್ತಿ ಹೇಳಿದರು.
Kambulbettu

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಅವರು ಮಾತನಾಡಿ ಗ್ರಂಥ ರಚನೆ ಮಾಡಿದ ವಿದ್ವಾಂಸರುಗಳು ಅಧ್ಯಾತ್ಮಿಕ ವಿದ್ಯಾಭ್ಯಾಸಕ್ಕೆ ಕೊನೆಯುಸಿರು ಇರುವ ತನಕ ಯಾವ ರೀತಿಯಲ್ಲಿ ತ್ಯಾಗ ಮಾಡಿದ್ದರು ಎಂಬುದನ್ನು ವಿವರಿಸಿದರು. ದರ್ಸ್ ವಿದ್ಯಾಭ್ಯಾಸ ಕೇಂದ್ರಕ್ಕೆ ಅಲ್ಲಾಹನ ಅನುಗ್ರಹ ಇದ್ದೇ ಇರುತ್ತದೆ ಎಂದು ಜಮಾಅತಿನ ಆಡಳಿತ ಮಂಡಳಿಗೆ ಧೈರ್ಯ ತುಂಬಿದರು.

ಕಂಬಳಬೆಟ್ಟುವಿನಲ್ಲಿ ಸರಿಸುಮಾರು 1978 ನೇ ಇಸವಿ ಅಂದರೆ 46 ವರ್ಷಗಳ ಹಿಂದೆ ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಉಳ್ಳಾಲ ಅವರ ದಿವ್ಯ ಹಸ್ತ ಹಾಗೂ ಆದೂರು ಹಸನ್ ಉಸ್ತಾದ್ ಅವರ ನೇತೃತ್ವದಲ್ಲಿ ಆರಂಭಗೊಂಡ ದರ್ಸ್ ವಿದ್ಯಾಭ್ಯಾಸದ ಪಾರಂಪರ್ಯವು ಮಾಸುವ ಮುನ್ನವೇ ಎಲ್ಲಾ ಸೌಲಭ್ಯದೊಂದಿಗೆ ಮರು ಸ್ಥಾಪನೆ ಗೊಂಡಿರುವುದು ಕಂಬಳಬೆಟ್ಟು ಪರಿಸರದ ಜನರಲ್ಲಿ ಆಧ್ಯಾತ್ಮಿಕತೆಯ ಮಂದಹಾಸ ಮೂಡಿಸಿದೆ.
New Project

ಕ್ಯಾಂಟೀನ್ ಕಟ್ಟಡವನ್ನು ಮರ್ಹೂಮ್ ಅಝೀಝ್ ಬದ್ರಿಯ ಅವರ ಮಕ್ಕಳು ನಿರ್ಮಿಸಿ ಕೊಟ್ಟರೆ, ಅಡುಗೆ ಮಾಡಲು ಪಾತ್ರೆಗಳು ಮತ್ತು ಇತರ ಸೌಕರ್ಯಗಳನ್ನು ಜಮಾಅತಿನ ದಾನಿಗಳು ಸೇರಿ ಒಟ್ಟಾಗಿ ಕೊಟ್ಟಿರುತ್ತಾರೆ.

ಕಾರ್ಯಕ್ರಮದಲ್ಲಿ ಖತೀಬರಾದ ಇಬ್ರಾಹಿಂ ಮದನಿ, ಅಬೂ ಸ್ವಾಲಿಹ್ ಸಖಾಫಿ ಬೆಳ್ಮ, ಹಾಫಿಲ್ ಅಹ್ಮದ್ ಕಾಮಿಲ್ ಸಖಾಫಿ ಮಳಲಿ, ಮಾಜಿ ಅಧ್ಯಕ್ಷರಾದ ವಿ.ಕೆ ಖಾದರ್ ಹಾಜಿ ಬದ್ರಿಯ, ಮೊಯ್ದು ಹಾಜಿ ದರ್ಬಾರ್, ಉಪಾಧ್ಯಕ್ಷರಾದ ಅಬ್ದುಲ್ ರಝಾಕ್ ಬಾಂಬೆ, ಕೋಶಧಿಕಾರಿ ಅಬೂಬಕ್ಕರ್ ನೆಕ್ಕರೆ ಮಹಮೂದ್ ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ನಾಸಿರ್, ಶಾಂತಿ ನಗರ ಮದ್ರಸ ಅಧ್ಯಕ್ಷ ಅಬ್ದುಲ್ ರಝಾಕ್(ಮೋನು), ಹಾಜಿ ಸುನ್ನಿ ಖಾದರ್, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಗಫೂರ್, ಮುಹಮ್ಮದ್ ಯಾಸಿರ್ ಸೇರಿದಂತೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
New Project

ಕಂಬಳಬೆಟ್ಟು ಮುಹಿಯ್ಯದ್ದೀನ್ ಹಾಗೂ ಇಬ್ರಾಹಿಂ ಜಮಾಅತ್ ಅಧ್ಯಕ್ಷರಾದ ಡಾ| ವಿ. ಕೆ ಬಷೀರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಮಾತನಾಡಿ ಆರಂಭದಲ್ಲಿ ಸುಮಾರು 50 ರಷ್ಟು ವಿದ್ಯಾರ್ಥಿಗಳಿಗೆ ದರ್ಸ್ ವಿದ್ಯಾಭ್ಯಾಸ ಬೋಧಿಸುವ ಗುರಿ ಹೊಂದಿದ್ದೇವೆ. ಅಲ್ಲದೆ ಜಮಾಅತಿನ ವ್ಯಾಪ್ತಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಉಮ್ಮರ್ ಸಖಾಫಿ ಕಂಬಳಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು.

Ad
Ad
Nk Channel Final 21 09 2023
Ad