ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಸೇವಾ ಸಂಸ್ಥೆ ಸಿ ಓ ಡಿ ಪಿ ಇದರ ಸ್ವರ್ಣ ಮಹೋತ್ಸವ ಸಂತ ಸಬಸ್ತಿಯನರ ಚರ್ಚ್ ಸಭಾಭವನದಲ್ಲಿ ಜರಗಿತು. ಸಿ ಓ ಡಿ ಪಿಯ ಸ್ವರ್ಣ ಸಂಭ್ರಮದ ಕೃತಜ್ಞ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ದಾನವರು ನೆರವೆರಿಸಿದರು.
Charch (1)

ಮೂವರು ಬಿಷಪರು 30 ಮಂದಿ ಗುರುಗಳು 300 ಮಂದಿ ಭಕ್ತ ವಿಶ್ವಾಸಿಗಳು ಪಾಲ್ಗೊಂಡರು. ಸುವರ್ಣ ಮಹೋತ್ಸವ ಸಂತ ಸೇಬಸ್ತಿಯನರ ಚರ್ಚ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಪೀಟರ್ ಪೌಲ್ ಸಲ್ದಾನವರು ಅಧ್ಯಕ್ಷ ಸ್ಥಾನವನ್ನು ವಹಿಸಿದರು.
New Project

ಶಿವಮೊಗ್ಗ ಧರ್ಮ ಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೊರವರು ಗೌರವಾನ್ವಿತ ಅತಿಥಿಯಾಗಿ, ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಮುಖ್ಯ ಅತಿಥಿಯಾಗಿ, ಮಾಜಿ ನಿರ್ದೇಶಕರು ಹಾಗೂ ವಂದನೀಯ ಎಡ್ವರ್ಡ್ ಪಿಂಟೊರವರು ಉಪಸ್ಥಿತರಾಗಿದ್ದರು ಪೆಟ್ರಿಶಿಯಾ ಧನ್ಯವಾದ ಸಮರ್ಪಿಸಿದರು.
Chrc

ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಲೋಬೊರವರು ಸಿ ಓ ಡಿ ಪಿ ಯಲ್ಲಿ ಸೇವೆ ಸಲ್ಲಿಸಿದ ನಿರ್ದೇಶಕರನ್ನು ಸನ್ಮಾನಿಸಿದರು. ಸ್ಥಾಪಕ ನಿರ್ದೇಶಕ ವಂದನೀಯ ಎಡ್ವಿನ್ ಪಿಂಟೋವರವನ್ನು ಮಂಗಳೂರಿನ ಬಿಷಪರು ಸತ್ಕರಿಸಿದರು.
Charc

ಸಿ.ಓ.ಡಿ.ಪಿ ನಡೆದು ಬಂದ ಹಾದಿ ಹಾಗೂ ಬಡಜನರಿಗೆ ಮನೆಕಟ್ಟಿ ಕೊಡುವ ಬಗ್ಗೆ ಸಾಕ್ಷ್ಯ ದಾಖಲೆ ಪ್ರಸ್ತುತ ಪಡಿಸಲಾಯಿತು. ಶ್ರೀ ಮೈಕಲ್ ಡಿಸೋಜಾ ಅನಿವಾಸಿ ಭಾರತೀಯ ಉದ್ಯಮಿ ಬಡವರಿಗೆ ಸೂರು ನೀಡುವ ಕಾರ್ಯಕ್ಕೆ ದಾನ ನೀಡಿದ ಅವರನ್ನು ಸನ್ಮಾನಿಸಲಾಯಿತು.

ಒಟ್ಟು 3 ಕೋಟಿ 11 ಲಕ್ಷದಲ್ಲಿ 1 ಕೋಟಿ 82 ಲಕ್ಷದ 75 ಸಾವಿರ 1,82,75000/- ಮೊತ್ತವನ್ನು ಶ್ರೀ ಮೈಕಲ್ ಡಿಸೋಜಾರವರು 75 ಹೊಸ ಮನೆಗಳಿಗೆ, 55 ಮನೆ ದುರಸ್ತಿಗೆ ದಾನ ಮಾಡಿದ ಮಹಾದಾನಿ ಇವರನ್ನು ಬಿಷಪ್ ಪೀಟರ್ ಪಾಲ್ ಸನ್ಮಾನಿಸಿದರು. ಕಾರ್ಯಕ್ರಮ ನಿರೂಪಣೆ ಶ್ರೀಮತಿ ಐರಿನ್ ರೆಬೆಲ್ಲೊ ಹಾಗೂ ಶ್ರೀ ಫ್ರಾನ್ಸಿಸ್ ರವರು ನಿರೂಪಿಸಿದರು.
New Project (1)

ಕಾರ್ಯಕ್ರಮದ ಜವಾಬ್ದಾರಿ ಶ್ರೀಮತಿ ನಿಕಿತಾ ಹಾಗೂ ಪ್ರವೀಣ್ ರವರು ಫಾದರ್ ವಿನ್ಸೆಂಟ್ ಡಿಸೋಜಾ ಸಿ ಓ ಡಿ ಪಿ ಕಾರ್ಯದರ್ಶಿ ಇವರ ಮುಖೇನ ವಹಿಸಿಕೊಂಡರು.
Charch (2)