ಲಕ್ನೋ: ಅಯೋಧ್ಯೆ ರಾಮ ಮಂದಿರದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಜತೆಗೆ ಅರ್ಚಕರ ಸಮವಸ್ತ್ರ ಮತ್ತು ಬಣ್ಣ ಬದಲಾಗಿದೆ. ಅರ್ಚಕರು ದೇವಾಲಯಕ್ಕೆ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಗರ್ಭಗುಡಿಯ ಪುರೋಹಿತರು ಕೇಸರಿ ಬಟ್ಟೆಗಳನ್ನು ಅಂದರೆ ಕೇಸರಿ ಪೇಟ, ಕೇಸರಿ ಕುರ್ತಾ ಮತ್ತು ಧೋತಿ ಧರಿಸುತ್ತಿದ್ದರು. ಇದೀಗ ಪುರೋಹಿತರು ಹಳದಿ ಬಣ್ಣದ ಧೋತಿ, ಅದೇ ಬಣ್ಣದ ಕುರ್ತಾ ಮತ್ತು ಪೇಟ ಧರಿಸುತ್ತಿದ್ದಾರೆ.

ಹೊಸ ಡ್ರೆಸ್‌ ಕೋಡ್‌ ಜುಲೈ 1ರಿಂದಲೇ ಜಾರಿಗೆ ಬಂದಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಪುರೋಹಿತರಿಗೆ ಹಳದಿ ಪೇಟ ಕಟ್ಟಲು ತರಬೇತಿ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.