ಚಿತ್ರದುರ್ಗ: ಪ್ರೀತಿಯ ಹಿನ್ನಲೆ, ಯುವತಿಯ ಪೊಷಕರಿಂದ ಯುವಕನನ್ನು ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ಹಾನಗಲ್ ಹಾಗೂ ತಳವಾರಹಳ್ಳಿಯಲ್ಲಿ ನಡೆದಿದೆ.
ಹಾನಗಲ್ ಗ್ರಾಮದ ನಾಗೇಶ್(22) ಕೊಲೆಯಾದ ಯುವಕ. ಕೊಲೆಮಾಡಿ ತಳವಾರಹಳ್ಳಿ ಬಳಿ ಯುವಕನ ಮೃತದೇಹ ಬಿಸಾಕಿದ್ದ ಆರೋಪಿಗಳು ಕೇಳಿಬಂದಿದೆ. ತಾಲ್ಲೂಕಿನ ರುದ್ರಮ್ಮನ ಹಳ್ಳಿ ಮೂಲದ ಯುವತಿ ಜತೆ ನಾಗೇಶ್ ಲವ್ ಮಾಡಿದ್ದನು. ಇಬ್ಬರ ಪ್ರೀತಿಗೆ ಯುವತಿಯ ಪೊಷಕರು ವಿರೋಧಿಸಿದ್ದರು.
ಆದರೂ ಎರಡು ವರ್ಷಗಳಿಂದ ಪ್ರೀತಿ ಭಲೆಯಲ್ಲಿ ಇಬ್ಬರು ಬಿದ್ದಿದ್ದರು. ಮಾತಾಡಲು ಯುವಕನನ್ನ ಕರೆಸಿಕೊಂಡು ಬರ್ಬಲ ಕೊಲೆ ಮಾಡಿದ್ದಾರೆ. ನಾಗೇಶನಿಗೆ ಮನಬಂದಂತೆ ಹಲ್ಲೆ ಮಾಡಿ ಕೊಲೆ ಮಾಡಿದ ಅರೋಪಿಗಳು ಕೇಳಿಬಂದಿದೆ.
ಎರಡು ದಿನಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಎಸ್ ಎಸ್ಪಿ ರಂಜಿತ್ ಕುಮಾರ್, ಬಂಡಾರು, ಮೊಳಕಾಲ್ಮೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿ ಪೊಷಕರಿಂದ ಕೊಲೆ ಮಾಡಲಾಗಿದ್ದು, ಆರೋಪಿಗಳ ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

