ಚಿತ್ರದುರ್ಗ: ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಅವರ ತಂದೆ, ತಾಯಿ ಹಾಗೂ ಅವರ ಪತ್ನಿಯನ್ನು ಭೇಟಿ ಮಾಡಿದ ವಿನೋದ್ ರಾಜ್ ಅವರೊಂದಿಗೆ ಮಾತನಾಡಿದ್ದಾರೆ. ರೇಣುಕಾಸ್ವಾಮಿ ತಂದೆ, ತಾಯಿ, ಪತ್ನಿ ಪೊಷಕರಿಗೆ ಧೈರ್ಯ ತುಂಬಿದ ನಟ ವಿನೋದ್ ರಾಜ್ ಅವರು ಮಗನ ಸಾವಿನ ಕುರಿತು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಚಿತ್ರದುರ್ಗ ನಗರದ VRS ಬಡಾವಣೆಯಲ್ಲಿನ ರೇಣುಕಾಸ್ವಾಮಿ ನಿವಾಸಕ್ಕೆ ವಿನೋದ್ ರಾಜ್ ಭೇಟಿ ಕೊಟ್ಟಿದ್ದಾರೆ.ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಕಾಲಿಗೆ ನಮಸ್ಕರಿಸಿದ ವಿನೋದ್ ರಾಜ್ ಕುಮಾರ್ ಅವರು ರೇಣುಕಾಸ್ವಾಮಿ ಅವರ ಗರ್ಭಿಣಿ ಪತ್ನಿ ಸಹನಾ ಹೆಸರಿಗೆ 1 ಲಕ್ಷದ ಚೆಕ್ ಬರೆದುಕೊಟ್ಟಿದ್ದಾರೆ. ತನ್ನ ತಾಯಿ ಲೀಲಾವತಿ ಹೆಸರಿನ ಮೇಲೆ ಸ್ವಾಮಿ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದ್ದಾರೆ.

